ಕಾಡುಪ್ರಾಣಿ ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
Update: 2021-07-01 21:05 IST
ಬ್ರಹ್ಮಾವರ, ಜು.1: ಕಾಡು ಪ್ರಾಣಿಯೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಕರ್ಜೆ ದ್ಯಾಂಗಲು ಕ್ರಾಸ್ ಬಳಿ ಜು.30ರಂದು ರಾತ್ರಿ ನಡೆದಿದೆ.
ಮೃತರನ್ನು ಪೆಜಮಂಗೂರು ಗ್ರಾಮದ ಗಾಂಧಿನಗರ ನಿವಾಸಿ ಗಣೇಶ್ ಮೊಗವೀರ(42) ಎಂದು ಗುರುತಿಸಲಾಗಿದೆ. ಇವರು ಹೊಸೂರು ಗ್ರಾಮದ ಕರ್ಜೆ ಅನಘ ಬಾರ್ನಲ್ಲಿ ಮೆನೇಜರ್ ಆಗಿದ್ದು, ರಾತ್ರಿ ಬಾರ್‌ನ ಕ್ಲೀನರ್‌ನನ್ನು ಸ್ಕೂಟರ್‌ನಲ್ಲಿ ಮನೆಗೆ ಬಿಟ್ಟು ಬಾರ್‌ಗೆ ವಾಪಾಸ್ಸು ಬರುತ್ತಿದ್ದರೆನ್ನಲಾಗಿದೆ.
ಈ ವೇಳೆ ಕಾಡು ಪ್ರಾಣಿ ಸ್ಕೂಟರ್ಗೆ ಅಡ್ಡ ಬಂದು ಡಿಕ್ಕಿ ಹೊಡೆದಿದ್ದು, ಇದರಿಂದ ಗಣೇಶ್ ಮೊಗವೀರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದರು. ಇದರಿಂದ ಗಂಭೀರ ವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.