×
Ad

​ಎಲ್‌ಐಸಿಯ ಸರಳ ಪಿಂಚಣಿ ಯೋಜನೆ ಬಿಡುಗಡೆ

Update: 2021-07-01 23:09 IST

ಮಂಗಳೂರು, ಜು. 1: ಭಾರತೀಯ ಜೀವ ವಿಮಾ ನಿಗಮ ಸರಳ ಪಿಂಚಣಿ ಯೋಜನೆಯನ್ನು ಜುಲೈ 1ರಂದು ಜಾರಿಗೆ ತಂದಿದೆ.
ಇದು ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರದ ಮಾರ್ಗಸೂಚಿಯ ಪ್ರಕಾರ ಜಾರಿಯಾದ ಪ್ರಮಾಣಿತ ಕ್ಷಿಪ್ರ ವರ್ಷಾಶನೆ ಯೋಜನೆಯಾಗಿದೆ.

ಈ ಯೋಜನೆಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಹಿರಿಯ ವಿಭಾಗೀಯ ಜನರಲ್ ಮ್ಯಾನೇಜರ್‌ಗಳ ಸಮಾವೇಶದ ಸಂದರ್ಭ ಹೈದರಾಬಾದ್‌ನ ವಲಯ ಕಚೇರಿಯಲ್ಲಿ ರೆನಲ್ ಮ್ಯಾನೇಜರ್ (ಸೌತ್ ಸೆಂಟ್ರಲ್ ರೆನ್) ಎಂ. ಜಗನ್ನಾಥ ಅವರು ಲೋಕಾರ್ಪಣೆಗೊಳಿಸಿದರು.

ಕರ್ನಾಟಕ ಪ್ರಾದೇಶಿಕ ವ್ಯವಸ್ಥಾಪಕ (ಮಾರಾಟ ) ಉದಯ ಕುಮಾರ್ ನವಣಿ ಹಾಗೂ ಆಂಧ್ರಪ್ರದೇಶ, ತೆಲಂಗಾಣ ಪ್ರಾದೇಶಿಕ ವ್ಯವಸ್ಥಾಪಕ (ಮಾರಾಟ) ಎಸ್. ಸಾಯಿನಾಥ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News