×
Ad

​ಉಡುಪಿ ಜಿ.ಪಂ. : ಕ್ಷೇತ್ರವಾರು ಮೀಸಲಾತಿಯ ಕರಡು ಅಧಿಸೂಚನೆ ಪ್ರಕಟ

Update: 2021-07-02 18:52 IST

ಉಡುಪಿ, ಜು.2: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 162ರಲ್ಲಿ ಪ್ರದತ್ತವಾದ ಅಧಿಕಾರ ವನ್ನು ಚಲಾಯಿಸಿ ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ನಿಯಮಗಳು 2021ರನ್ವಯ ಉಡುಪಿ ಜಿಲ್ಲಾ ಪಂಚಾಯತ್‌ಗೆ ನಡೆಯಬೇಕಿರುವ ಚುನಾವಣೆಗೆ ಕ್ಷೇತ್ರವಾರು ಮೀಸಲಾತಿ ನಿಗದಿ ಪಡಿಸಿ ಕರಡು ಅಧಿಸೂಚನೆಯನ್ನು ಹೊರಡಿಸಿದೆ.

ಈ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಈ ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಜುಲೈ 8ರೊಳಗೆ ಕಾರ್ಯದರ್ಶಿಗಳು, ರಾಜ್ಯ ಚುನಾವಣಾ ಆಯೋಗ, ಒಂದನೇ ಮಹಡಿ, ಕೆಎಸ್‌ಸಿಎಂಎಫ್ ಕಟ್ಟಡ (ಹಿಂಭಾಗ), ನಂ.8, ಕನ್ನಿಂಗ್‌ಹ್ಯಾಂ ರಸ್ತೆ, ಬೆಂಗಳೂರು-560052 ಇವರಿಗೆ ತಲುಪುವಂತೆ ಕಳುಹಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ, ಹೆಸರು ಹಾಗೂ ಮೀಸಲಾತಿ ವಿವರ:

1.ಪೆರ್ಡೂರು (ಹಿರಿಯಡ್ಕ)-ಸಾಮಾನ್ಯ (ಮಹಿಳೆ), 2.80 ಬಡಗುಬೆಟ್ಟು- ಸಾಮಾನ್ಯ, 3.ಉದ್ಯಾವರ- ಹಿಂದುಳಿದ ವರ್ಗ ‘ಬ’, 4.ತೋನ್ಸೆ (ಕಲ್ಯಾಣಪುರ) -ಸಾಮಾನ್ಯ(ಮಹಿಳೆ), 5.ಕುರ್ಕಾಲು (ಕಟಪಾಡಿ)- ಸಾಮಾನ್ಯ, 6.ಶಿರ್ವ- ಅನುಸೂಚಿತ ಜಾತಿ (ಮಹಿಳೆ), 7.ಬಡಾ (ಉಚ್ಚಿಲ)-ಸಾಮಾನ್ಯ, 8.ನಡ್ಸಾಲು (ಪಡುಬಿದ್ರಿ)-ಸಾಮಾನ್ಯ (ಮಹಿಳೆ), 9.ಮಣೂರು (ಕೋಟ)- ಸಾಮಾನ್ಯ (ಮಹಿಳೆ), 10.ಶಿರಿಯಾರ (ಮಂದಾರ್ತಿ)- ಹಿಂದುಳಿದ ವರ್ಗ ‘ಅ’(ಮಹಿಳೆ).

11.ಚೇರ್ಕಾಡಿ- ಹಿಂದುಳಿದ ವರ್ಗ ‘ಅ’(ಮಹಿಳೆ), 12.ವಾರಂಬಳ್ಳಿ (ಬ್ರಹ್ಮಾವರ)-ಸಾಮಾನ್ಯ, 13.ಉಪ್ಪೂರು- ಅನುಸೂಚಿತ ಜಾತಿ, 14.ಶಿರೂರು -ಸಾಮಾನ್ಯ(ಮಹಿಳೆ), 15.ಕೊಲ್ಲೂರು- ಸಾಮಾನ್ಯ (ಮಹಿಳೆ), 16. ಕಿರಿಮಂಜೇಶ್ವರ- ಹಿಂದುಳಿದ ವರ್ಗ‘ಅ’, 17.ಗಂಗೊಳ್ಳಿ (ತ್ರಾಸಿ)- ಸಾಮಾನ್ಯ, 18.ಕರ್ಕುಂಜೆ (ವಂಡ್ಸೆ)- ಹಿಂದುಳಿದ ವರ್ಗ ‘ಅ’(ಮಹಿಳೆ), 19. ಕಾವ್ರಾಡಿ- ಹಿಂದುಳಿದ ವರ್ಗ ‘ಅ’, 20.ಕೋಟೇಶ್ವರ-ಸಾಮಾನ್ಯ.

21.ಬೀಜಾಡಿ- ಹಿಂದುಳಿದ ವರ್ಗ ‘ಅ’, 22.ಸಿದ್ಧಾಪುರ-ಸಾಮಾನ್ಯ (ಮಹಿಳೆ), 23.ಮೊಳಹಳ್ಳಿ(ಹಾಲಾಡಿ)- ಸಾಮಾನ್ಯ, 24.ಮರ್ಣೆ(ಅಜೆಕಾರು) -ಅನುಸೂಚಿತ ಪಂಗಡ (ಮಹಿಳೆ), 25.ಕುಕ್ಕುಂದೂರು(ಬೈಲೂರು)- ಹಿಂದುಳಿದ ವರ್ಗ ‘ಬ’(ಮಹಿಳೆ), 26.ಮುಡಾರು (ಬಜಗೋಳಿ)- ಹಿಂದುಳಿದ ವರ್ಗ ‘ಅ’(ಮಹಿಳೆ), 27.ನಿಟ್ಟೆ-ಸಾಮಾನ್ಯ, 28.ಮುಂಡ್ಕೂರು (ಬೆಳ್ಮಣ್)-ಸಾಮಾನ್ಯ, 29.ಹೆಬ್ರಿ- ಹಿಂದುಳಿದ ವರ್ಗ ‘ಅ’, 30.ಚಾರಾ- ಸಾಮಾನ್ಯ (ಮಹಿಳೆ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News