ಮಂಗಳೂರು: ಹಾಜಿ ಡಿ.ಕೆ. ಅಹ್ಮದ್ ನಿಧನ
ಮಂಗಳೂರು, ಜು. 2: ಕೈಕಂಬ ನಿವಾಸಿ ಹಾಜಿ ಡಿ.ಕೆ. ಅಹ್ಮದ್ (ಕುಂಞಿ ಅಹ್ಮದ್ ಮಾಸ್ಟರ್ ಕೈಕಂಬ) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ಬೆಳಗ್ಗೆ ನಿಧನರಾದರು. ಇವರಿಗೆ 84 ವರ್ಷ ವಯಸ್ಸಾಗಿತ್ತು.
ಮೃತರು ಸಹಾಯಕ ಶಿಕ್ಷಣ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಸದಾ ಕ್ರಿಯಾಶೀಲರಾಗಿದ್ದು, ಮೃದು ವ್ಯಕ್ತಿತ್ವ ಹೊಂದಿದ್ದರು. ಉಲಮಾ, ಸಾದಾತುಗಳ ನಿಕಟ ಸಂಬಂಧ ಹೊಂದಿದ್ದರು. ಮೂಳೂರು ಸುನ್ನಿ ಸೆಂಟರ್, ಕೈಕಂಬ ಸುನ್ನಿ ಮರ್ಕಝ್ ಸಹಿತ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸಂತಾಪ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ, ದಾರುನ್ನೂರ್ ಯುಎಇ ಅಧ್ಯಕ್ಷರು/ ಕಾರ್ಯಕಾರಿ ಸಮಿತಿ, ಮಸ್‌ದರ್ ಎಜ್ಯು ಆ್ಯಂಡ್ ಚಾರಿಟಿಯ ಕಾರ್ಯಾಧ್ಯಕ್ಷ ಅಬೂ ಸುಫ್ಯಾನ್ ಮದನಿ, ಶಾಸಕ ಯು.ಟಿ. ಖಾದರ್, ಮಾಜಿ ಶಾಸಕ ಮೊಯ್ದಿನ್ ಬಾವಾ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.