ಕೊಚ್ಚಿಯಿಂದ ದ್ವೀಪಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ವರ್ಗಾಯಿಸುವಂತೆ ಆದೇಶಿಸಿದ ಲಕ್ಷದ್ವೀಪ ಆಡಳಿತ

Update: 2021-07-02 15:43 GMT
photo: twitter

ಕೊಚ್ಚಿ: ವಿವಾದಾತ್ಮಕ ಕ್ರಮವೊಂದರಲ್ಲಿ, ಲಕ್ಷದ್ವೀಪ ಆಡಳಿತವು ಕೊಚ್ಚಿಯ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ದ್ವೀಪಗಳಿಗೆ ವರ್ಗಾಯಿಸುವಂತೆ ಶುಕ್ರವಾರ ಆದೇಶಿಸಿದೆ.

ಎಲೆಕ್ಟ್ರಾನಿಕ್ ಉಪಕರಣಗಳು, ಪೀಠೋಪಕರಣಗಳು ಹಾಗೂ  ತನ್ನ ಐವರು ಸಿಬ್ಬಂದಿ ನಿರ್ವಹಿಸಿದ ಫೈಲ್ ಗಳಂತಹ ಎಲ್ಲಾ ಕಚೇರಿ ಸಾಮಗ್ರಿಗಳನ್ನು ದ್ವೀಪಗಳಲ್ಲಿನ ಶಿಕ್ಷಣ ನಿರ್ದೇಶನಾಲಯಕ್ಕೆ ವರ್ಗಾಯಿಸುವಂತೆ ಕೊಚ್ಚಿಯಲ್ಲಿರುವ ತನ್ನ ಶಿಕ್ಷಣಾಧಿಕಾರಿಗೆ ಲಕ್ಷದ್ವೀಪ ಆಡಳಿತದ ಶಿಕ್ಷಣ ನಿರ್ದೇಶನಾಲಯವು ತನ್ನ ಆದೇಶದಲ್ಲಿ ನಿರ್ದೇಶಿಸಿತು.

ಲಕ್ಷದ್ವೀಪ ಆಡಳಿತವು ಕೊಚ್ಚಿಯಲ್ಲಿ ಒಂದು ಕಚೇರಿಯನ್ನು ಹೊಂದಿದ್ದು, ಇದರಲ್ಲಿ ಹಲವಾರು ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ.

ಆಡಳಿತದ ನಿರ್ಧಾರವು ಕೇರಳದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ದ್ವೀಪಗಳ ಸುಮಾರು 4,000 ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಲಕ್ಷದ್ವೀಪ ಸಂಸದ ಮುಹಮ್ಮದ್ ಫೈಝಲ್ ಪಿ. ಪಿ. ಹೇಳಿದ್ದಾರೆ.

ಆದೇಶದ ಪ್ರಕಾರ, ಅಕೌಂಟೆಂಟ್, ಸ್ಟೆನೊಗ್ರಾಫರ್, ಇಬ್ಬರು ಕ್ಲೆರಿಕಲ್ ಸಿಬ್ಬಂದಿ ಹಾಗೂ  ಎಂಎಸ್ಇ ಸೇರಿದಂತೆ ಅಧಿಕಾರಿಗಳನ್ನು ಸ್ಥಳಾಂತರಿಸಲಾಗುತ್ತಿದೆ.

ಪಿ ಟಿ ಐ ಯೊಂದಿಗೆ ಮಾತನಾಡಿದ ಸಂಸದ ಫೈಝಲ್, ಆಡಳಿತದ ಶಿಕ್ಷಣ ಕಚೇರಿ ಕಳೆದ ಮೂರು ದಶಕಗಳಿಂದ ತನ್ನ ಕೊಚ್ಚಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಹಾಗೂ  ಮುಖ್ಯ ಭೂಭಾಗದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಅಗತ್ಯಗಳಿಗೆ ಸುಲಭವಾಗಿ ಪ್ರವೇಶಿಸಲು ಇದನ್ನು ನಿಗದಿಪಡಿಸಲಾಗಿದೆ. ಇದು ಅವರ ವಿದ್ಯಾರ್ಥಿವೇತನ, ಮೆಸ್  ಶುಲ್ಕ, ಹಾಸ್ಟೆಲ್ ಶುಲ್ಕ ಹಾಗೂ  ಬೋಧನಾ ಶುಲ್ಕವನ್ನು ಒಳಗೊಂಡಿದೆ ಎಂದರು.

"ಹೊಸ ನಿರ್ಧಾರದಿಂದ, ತಿರುವನಂತಪುರ ಅಥವಾ ಭಾರತದ ಇತರ ಭಾಗಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಈಗ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಲಕ್ಷದ್ವೀಪಕ್ಕೆ ಪ್ರಯಾಣಿಸಬೇಕಾಗಿದೆ. ಇಲ್ಲದಿದ್ದರೆ, ಅವರು ತಮ್ಮ ಶಿಕ್ಷಣವನ್ನು ಪೂರೈಸಲು ಹಾಗೂ ಅವರ ಸಮಸ್ಯೆಗಳನ್ನು ಪರಿಹರಿಸಲು ಕೊಚ್ಚಿಗೆ ಪ್ರಯಾಣಿಸಬೇಕಾಗುತ್ತದೆ" ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News