ಕಲ್ಪನಾ ಚಾವ್ಲಾ ಬಳಿಕ ಅಂತರಿಕ್ಷ ಯಾನಕ್ಕೆ ಸಜ್ಜಾಗಿರುವ ಇನ್ನೋರ್ವ ಭಾರತೀಯ ಮೂಲದ ಮಹಿಳೆ ಸಿರೀಶಾ ಬಂಡ್ಲ

Update: 2021-07-03 16:50 GMT
photo: twitter

ವಾಷಿಂಗ್ಟನ್, ಜು.3: ಅಮೆರಿಕದ ವರ್ಜಿನ್ ಗೆಲಾಟಿಕ್ಸ್ ಸಂಸ್ಥೆಯ ಬಾಹ್ಯಾಕಾಶ ಯಾನದಲ್ಲಿ ಪಾಲ್ಗೊಳ್ಳುವ ತಂಡದಲ್ಲಿ ಭಾರತೀಯ ಮೂಲದ ಸಿರೀಶಾ ಬಾಂದ್ಲ ಸ್ಥಾನ ಪಡೆದಿರುವುದಾಗಿ ವರದಿಯಾಗಿದೆ.

ಕಲ್ಪನಾ ಚಾವ್ಲಾ ಬಳಿಕ ಈ ಸಾಧನೆ ಮಾಡಿರುವ ಎರಡನೇ ಭಾರತೀಯ ಮಹಿಳೆಯಾಗಿದ್ದಾರೆ ಸಿರೀಶಾ. ಬಾಹ್ಯಾಕಾಶ ಯಾನದಲ್ಲಿ ಪಾಲ್ಗೊಂಡಿರುವ 4ನೇ ಭಾರತೀಯರಾಗಿದ್ದಾರೆ.

ತಂಡದಲ್ಲಿರುವ 4ನೆ ಗಗನಯಾತ್ರಿಯಾಗಿರುವ ಬಾಂದ್ಲ ಇಂಜಿನಿಯರಿಂಗ್ ಪದವೀಧರೆ. ಆಂಧ್ರಪ್ರದೇಶದ ಗುಂಟೂರು ಮೂಲದವರಾಗಿದ್ದು ಅಮೆರಿಕದ ಹೂಸ್ಟನ್ನಲ್ಲಿ ಓದಿ ಬೆಳೆದವರು. ಬಿಲಿಯನೇರ್ ಉದ್ಯಮಿ ರಿಚರ್ಡ್ ಬ್ರಾನ್ಸನ್ ಕೂಡಾ ಈ ತಂಡದಲ್ಲಿದ್ದಾರೆ. ಭಾರತೀಯ ಸಂಜಾತ ಮಹಿಳೆಯರು ಎಲ್ಲಾ ಅಡೆತಡೆಯನ್ನೂ ಮೀರಿ ನಿಂತು ತಮ್ಮ ಸಾಮರ್ಥ್ಯ ಪ್ರದರ್ಶಿಸುವುದನ್ನು ಮುಂದುವರಿಸಿದ್ದಾರೆ. 

ಜುಲೈ 11ರಂದು ತೆಲುಗು ಮೂಲದ ಸಿರೀಶಾ ಬಾಂದ್ಲ ಬಾಹ್ಯಾಕಾಶ ಯಾನ ಕೈಗೊಳ್ಳಲು ಸಿದ್ಧರಾಗಿದ್ದು ಇದು ಭಾರತೀಯರೆಲ್ಲರಿಗೂ ಹೆಮ್ಮೆ ತರುವ ವಿಷಯ ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿದ್ದಾರೆ. ಜೊತೆಗೆ, ತಂಡದ ಐವರು ಸದಸ್ಯರು ಒಟ್ಟಾಗಿ ನಿಂತಿರುವ ಮತ್ತು ಸಿರೀಶಾ ಒಬ್ಬರೇ ನಿಂತಿರುವ ಫೊಟೋವನ್ನು ಶೇರ್ ಮಾಡಿದ್ದಾರೆ. ಈ ಟ್ವೀಟ್ಗೆ ಹಲವರು ಪ್ರತಿಕ್ರಿಯಿಸಿ ಸಿರೀಶಾರನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News