ಕಾರ್ಕಳ: ಡಾ.ಟಿಎಂಎ ಪೈ ಆಸ್ಪತ್ರೆಗೆ 3ಡಯಾಲಿಸಿಸಿಸ್ ಯಂತ್ರ ಕೊಡುಗೆ
ಕಾರ್ಕಳ, ಜು.3: ಕಾರ್ಕಳದ ರೋಟರಿ ಕ್ಲಬ್, ಮಣಿಪಾಲದ ಜಾಗತಿಕ ಅನುದಾನ ಯೋಜನೆ (ಗ್ಲೋಬಲ್ ಗ್ರಾಂಟ್ ಫ್ರ್ರಾಜೆಕ್ಟ್)ಯ ಅಂವಾಗಿ ಸುಮಾರು 25 ಲಕ್ಷ ರೂ. ಮೌಲ್ಯದ ಮೂರು ಡಯಾಲಿಸಿಸ್ ಯಂತ್ರಗಳನ್ನು ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಯಿತು.
ಸಮುದಾಯದಲ್ಲಿ ಮಧುಮೇಹ ತಡೆಗಟ್ಟುವಿಕೆ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಜಾಗೃತಿಗಾಗಿರುವ ರೋಟರಿ ಕ್ಲಬ್ ಮಣಿಪಾಲದ ಮಹಾತ್ವಕಾಂಕ್ಷೆ ಯೋಜನೆಯನ್ನು ರೋಟರಿ ಜಿಲ್ಲಾ 3182ರ ಗವರ್ನರ್ ರಾಜಾರಾಮ್ ಭಟ್ ಕಾರ್ಕಳದ ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಉದ್ಘಾಟಿಸಿದರು.
ಸಮುದಾಯ ಮಧುಮೇಹ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಶಿಬಿರಗಳನ್ನು ನಡೆಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಭಾಗವಾಗಿ ಆಸ್ಪತ್ರೆಗೆ ಮೂರು ಡಯಾಲಿಸಿಸ್ ಯಂತ್ರಗಳನು್ನ ನೀಡಲಾಗಿದೆ ಎಂದವರು ತಿಳಿಸಿದರು.
ರೋಟರಿ ಜಿಲ್ಲಾ 3182 ಚುನಾಯಿತ ಗವರ್ನರ್ ಡಾ. ಎಚ್. ಜಯಗೌರಿ, ರೋಟರಿ ಕ್ಲಬ್ ಮಣಿಪಾಲ ಅಧ್ಯಕ್ಷ ಪ್ರಶಾಂತ್ ಹೆಗ್ಡೆ, ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ರೋಟರಿ ಪೂರ್ವ ಜಿಲ್ಲಾ ಗವನರ್ರ್ ಡಾ. ಭರತೇಶ್ ಅಧಿರಾಜ್, ಮಣಿಪಾಲ ಕೆಎಂಸಿ ಆಸ್ಪತ್ರೆ ಮೂತ್ರ ಪಿಂಡ ವಿಭಾಗ ಮುಖ್ಯಸ್ಥ ಡಾ. ಶಂಕರ್ ಪ್ರಸಾದ್ ಮತ್ತು ಪ್ರಾಧ್ಯಾಪಕ ಡಾ. ರವೀಂದ್ರ ಪ್ರಭು, ಕಾರ್ಕಳ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಕೀರ್ತಿನಾಥ ಬಲ್ಲಾಳ ಭಾಗವಹಿಸಿದ್ದರು.
ಜು.6ರಿಂದ ಜಾರಿಗೆ ಬರುವಂತೆ ಆಸ್ಪತ್ರೆಯಲ್ಲಿ ಮೂತ್ರಪಿಂಡ ವಿಭಾಗದ ಹೊರರೋಗಿ ವಿಭಾಗ ಮತ್ತು ಡಯಾಲಿಸಿಸ್ ಸೌಲಭ್ಯ ವನ್ನು ಆರಂಭಿಸಲಾಗುವುದು. ಈ ವಿಭಾಗವು ಪ್ರತೀ ಮಂಗಳವಾರ ಮತ್ತು ಶುಕ್ರವಾರ ಮದ್ಯಾಹ್ನ ಗಂಟೆ 2 ರಿಂದ ಸಂಜೆ 5 ರವರಗೆ ಕಾರ್ಯನಿರ್ವಹಿಸಲಿದೆ. ಡಯಾಲಿಸಿಸ್ ಸೌಲಭ್ಯವು ಪ್ರತೀ ದಿನ ದೊರೆಯಲಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9731601149 ಅಥವಾ 08258-230583ಗೆ ಕರೆ ಮಾಡಬಹುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.