ಜು.6ರಂದು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಚಳವಳಿ
ಉಡುಪಿ, ಜು.3: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ (ಸಿಐಟಿಯು) ನೇತೃತ್ವದಲ್ಲಿ ಜು.6ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಚಳವಳಿ ನಡೆಸಲು ನಿರ್ಧರಿಸಲಾಗಿದೆ.
ಕಲ್ಯಾಣ ಮಂಡಳಿಯು ಕೊವೀಡ್ ಪರಿಹಾರವಾಗಿ 10 ಸಾವಿರ ರೂ ಪ್ರಕಟಿಸಬೇಕು. 5ಲಕ್ಷ ರೂ. ಮನೆ ಸಹಾಯಧನಕ್ಕಾಗಿ ನೀಡಬೇಕು. ಕಾರ್ಮಿಕರು ಚಿಕಿತ್ಸೆಗಾಗಿ ಖರ್ಚು ಮಾಡಿದ ಸಂಪೂರ್ಣ ವೆಚ್ಚವನ್ನು ಪಾವತಿಸಲು ಕ್ರಮ ವಹಿಸಬೇಕು. ಮಂಡಳಿಯಲ್ಲಿ ನಡೆಯುತ್ತಿರುವ ಸಾವಿರಾರು ಬೋಗಸ್ ಫಲಾನುಭವಿಗಳನ್ನು ಪತ್ತೆ ಹಚ್ಚಲು ಕ್ರಮ ವಹಿಸಬೇಕು. ತಂತ್ರಾಂಶ ಅಳವಡಿಕೆ, ಟೂಲ್ ಕಿಟ್, ಕ್ಯಾಲೆಂಡರ್ ಮುದ್ರಣ, ಆಹಾರ ಕಿಟ್, ವಲಸೆ ಕಾರ್ಮಿಕರಿಗೆ ವಸತಿ ನಿರ್ಮಾಣ, ಅಂಬ್ಯೂಲೆನ್ಸ್ ಖರೀದಿ ಕುರಿತು ತನಿಖೆ ನಡೆಸಬೇಕೆಂದು ಸಮಿತಿ ಆಗ್ರಹಿಸಿದೆ.
ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಜು.1ರಂದು ನಡೆದ ಸಭೆಯಲ್ಲಿ ಕಾರ್ಮಿಕರಿಗೆ ನೀಡಲಾಗುತ್ತಿರುವ ಸಹಾಯ ಧನವನ್ನು ಏರಿಕೆ ಮಾಡಿರುವ ತೀರ್ಮಾನವನ್ನು ಸಮಿತಿ ಸ್ವಾಗತಿಸಿದ್ದು ಇದು ಕಟ್ಟಡ ಕಾರ್ಮಿಕ ಸಂಘಗಳು ಈ ಹೆಚ್ಚಳಕ್ಕಾಗಿ ನಿರಂತರವಾಗಿ ನಡೆಸಿದ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಪರಿಷ್ಕೃತ ಹೆಚ್ಚಳವನ್ನು ಕೂಡಲೇ ತ್ವರಿತಗತಿಯಲ್ಲಿ ಫಲಾನುಭವಿಗಳಿಗೆ ತಲುಪಲು ಮಂಡಳಿ ಆಡಳಿತ ಅಗತ್ಯ ಕ್ರಮ ವಹಿಸಬೇಕು ಎಂದು ಸಮಿತಿ ಸಂಚಾಲಕರಾದ ಸುರೇಶ ಕಲ್ಲಾಗರ, ಶೇಖರ ಬಂಗೇರ, ರೊನಾಲ್ಡ್ ಕ್ವಾಡ್ರಸ್ ಪ್ರಕಟಣೆಯಲ್ಲಿ ಒತ್ತಾಯಿಸಿ ದ್ದಾರೆ.