ಹೊಳೆಯಲ್ಲಿ ಮುಳುಗಿ ಮಹಿಳೆ ಮೃತ್ಯು
Update: 2021-07-03 21:37 IST
ಗಂಗೊಳ್ಳಿ, ಜು.3: ಹಡವು ಗ್ರಾಮದ ಸೌಪರ್ಣಿಕ ಹೊಳೆಯಲ್ಲಿ ಏಡಿ ಹಿಡಿಯಲು ಹೋದ ಮಹಿಳೆಯೊಬ್ಬರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಚಂದು ಪೂಜಾರ್ತಿ(65) ಎಂದು ಗುರುತಿಸಲಾಗಿದೆ. ಇವರು ಜು.2ರಂದು ಬೆಳಗ್ಗೆ ಏಡಿ ಹಿಡಿಯಲು ಸೌಪರ್ಣಿಕ ಹೊಳೆ ಯಲ್ಲಿ ಅಟ್ಟೆ ಬಲೆ ಎತ್ತಲು ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದರು. ಇವರ ಮೃತದೇಹ ಜು.3ರಂದು ಬೆಳಗ್ಗೆ 8:30ರ ಸುಮಾರಿಗೆ ಸೌಪರ್ಣಿಕ ಹೊಳೆಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.