ಆರ್ಥಿಕ ಮುಗ್ಗಟ್ಟು : ಆತ್ಮಹತ್ಯೆ
Update: 2021-07-03 21:41 IST
ಕಾರ್ಕಳ, ಜು.3: ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ರವಿ ಸಾಲ್ಯಾನ್(50) ಎಂಬವರು ಆರ್ಥಿಕ ಮುಗ್ಗಟ್ಟಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಜು.2ರಂದು ಮಧ್ಯಾಹ್ನ ಮನೆಯ ಬಳಿಯ ಹಾಡಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.