ಜು.4: ವೆನ್ಲಾಕ್ ಆಸ್ಪತ್ರೆಯಲ್ಲಿ ಲಸಿಕೆಗೆ ಅವಕಾಶ
Update: 2021-07-03 22:36 IST
ಮಂಗಳೂರು, ಜು.3: ವೆನ್ಲಾಕ್ ಆಸ್ಪತ್ರೆಯಲ್ಲಿ ಜು.4ರ ರವಿವಾರ ಕೋವ್ಯಾಕ್ಸಿನ್‌ನ ಒಂದನೇ ಮತ್ತು ಎರಡನೇ ಡೋಸ್ ಲಸಿಕೆ ಯನ್ನು ನೀಡಲಾಗುವುದು ಎಂದು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಕೋವಿಶೀಲ್ಡ್ ಲಸಿಕೆಯ 1 ನೇ ಡೋಸ್ ಪಡೆದು 84 ದಿನ ಪೂರೈಸಿದ ಫಲಾನುಭವಿಗಳಿಗೆ ಸಹ 2ನೇ ಡೋಸ್ ಲಸಿಕೆಯನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ.
ಈಗಾಗಲೇ ನಗರ ಪ್ರದೇಶಗಳಲ್ಲಿರುವ ಲಸಿಕಾ ಸತ್ರಗಳಲ್ಲಿ ಲಸಿಕೆ ಪಡೆಯಲು ಶೇ.75 ಡೋಸ್‌ಗಳನ್ನು ಆನ್ ಲೈನ್ ಮೂಲಕ ನೋಂದಾಯಿಸಲಾಗುತ್ತಿದೆ, ಇನ್ನು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿರುವ ಲಸಿಕಾ ಸತ್ರಗಳಲ್ಲಿ ಶೇ.25 ರಷ್ಟು ಡೋಸ್‌ಗಳನ್ನು ಆನ್ ಲೈನ್ ಮೂಲಕ ನೋಂದಾಯಿಸಿಕೊಂಡವರಿಗೆ ಲಸಿಕಾ ಶಿಬಿರಕ್ಕೆ ಬರಲು ಅನುವು ಮಾಡಿಕೊಡಲಾ ಗುವುದು ಎಂದು ತಿಳಿಸಿದ್ದಾರೆ.
ಇನ್ನುಳಿದ ಶೇ.75 ಡೋಸ್‌ಗಳನ್ನು ಸ್ಥಳದಲ್ಲಿಯೇ ನೋಂದಾಯಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.