×
Ad

ಕೋವಿಡ್ ಲಸಿಕೆ ಲಭ್ಯತೆಗೆ ಕೋರಿ ದ.ಕ. ಮುಸ್ಲಿಂ ಎಸೋಸಿಯೇಶನ್ ನಿಯೋಗ ಜಿಲ್ಲಾಧಿಕಾರಿ ಭೇಟಿ

Update: 2021-07-03 22:48 IST

ಮಂಗಳೂರು, ಜೂ. 3: ಪ್ರಸಕ್ತ ಕೊರೋನ ಪಿಡುಗಿನ ಸಕ್ರಿಯ ಪ್ರಕರಣ ಇಳಿಮುಖ ಹಿನ್ನೆಲೆಯಲ್ಲಿ, ರಾಜ್ಯ ಸರಕಾರವು ಧಾರ್ಮಿಕ ಕ್ಷೇತ್ರ ಸಂದರ್ಶನಗಳಿಗೆ ಅವಕಾಶ ಒದಗಿಸಿರುವ ಅನ್ವಯದಂತೆ, ಜಿಲ್ಲಾಡಳಿತ ನೀಡುವ ಎಲ್ಲಾ ಮಾರ್ಗಸೂಚಿಗಳನ್ನೂ ಅನುಸರಿಸಿ ಮುಸ್ಲಿಮರಿಗೆ ತಮ್ಮ ಐದು ಹೊತ್ತಿನ ಮತ್ತು ಶುಕ್ರವಾರದ ಪ್ರಾರ್ಥನೆಯನ್ನು ಮಸೀದಿಯಲ್ಲಿ ನಿರ್ವಹಿಸಲು ಅವಕಾಶ ನೀಡುವಂತೆ, ದಕ್ಷಿಣ ಕನ್ನಡ ,ಮುಸ್ಲಿಂ ಎಸೋಸಿಯೇಶನ್  ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾಗಿರುವ, ಎಸ್. ಎಮ್. ರಶೀದ್ ಹಾಜಿಯವರ ನೇತೃತ್ವದಲ್ಲಿನ ನಿಯೋಗವು  ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಈಗಾಗಲೇ ಶಿಕ್ಷಣ ಸಂಸ್ಥೆಗಳ ಮೂಲಕ ಕೋವಿಡ್ ಲಸಿಕೆ ನೀಡಲಾಗುವ  ಕ್ರಮವನ್ನು ಪ್ರಶಂಸಿದ ನಿಯೋಗವು, ಆದರೆ  ಇದರ ಸದುಪಯೋಗ  ವಿದ್ಯಾರ್ಥಿ ಸಮೂಹಕ್ಕೆ    ಮಾತ್ರವಾಗಿರುವುದರಿಂದ ಇದಕ್ಕೆ ಮಸೀದಿಗಳನ್ನೂ ಸೇರಿಸಿದಂತೆ, ಎಲ್ಲಾ ಧಾರ್ಮಿಕ ಕ್ಷೇತ್ರ ಗಳಲ್ಲಿಯೂ ಲಭ್ಯವಾಗುವಂತೆ ವಿಸ್ತರಿಸಬೇಕಾಗಿ ಕೇಳಿಕೊಂಡಿದೆ.

ಈ ಸಂದರ್ಭದಲ್ಲಿ, ದಕ್ಷಿಣ ಕನ್ನಡ ಮುಸ್ಲಿಂ ಎಸೋಸಿಯೇಶನ್ ಇದರ ಸಂಘಟನಾ ಕಾರ್ಯದರ್ಶಿ, ಎಸ್. ಎಂ. ಫಾರೂಕ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್, ಕೋಶಾಧಿಕಾರಿ ಬಿ. ಎಸ್. ಬಶೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News