×
Ad

ಕಾಸರಗೋಡು: ಸಮುದ್ರದಲ್ಲಿ ಮಗುಚಿಬಿದ್ದ ದೋಣಿ; ಮೂವರು ನಾಪತ್ತೆ

Update: 2021-07-04 10:29 IST

ಕಾಸರಗೋಡು, ಜು.4: ಮೀನುಗಾರಿಕಾ ದೋಣಿಯೊಂದು ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾದ ಘಟನೆ ಕಾಸರಗೋಡು ಕೀಯೂರು ಸಮುದ್ರದಲ್ಲಿ ಇಂದು ಮುಂಜಾನೆ ನಡೆದಿರುವುದು ವರದಿಯಾಗಿದೆ. ಘಟನೆಯಲ್ಲಿ ನಾಲ್ವರು  ಪಾರಾಗಿದ್ದಾರೆ.

ಕಸಬಾ ಕಡಪ್ಪುರದ  ಸಂದೀಪ್(33), ರತೀಶ್(30) ಮತ್ತು ಕಾರ್ತಿಕ್ (29) ನಾಪತ್ತೆಯಾದವರು. 
ರವಿ(40) , ಶಿಬಿನ್(30) ಹಾಗೂ ಮಣಿಕುಟ್ಟನ್(35) ಎಂಬವರು ಈಜಿ ದಡ ಸೇರಿದ್ದಾರೆ. ಅಸ್ವಸ್ಥಗೊಂಡಿರುವ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮುದ್ರದ ದೈತ್ಯ ಅಲೆಗಳ ರಭಸಕ್ಕೆ ಫೈಬರ್ ದೋಣಿ ಮಗುಚಿ ಬಿದ್ದು ಈ ಅನಾಹುತ ಸಂಭವಿಸಿದೆ. ಸಮುದ್ರಕ್ಕೆ ಬಿದ್ದು ನಾಪತ್ತೆಯಾದವರಿಗಾಗಿ ಕರಾವಳಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಮೀನುಗಾರರು ಶೋಧ ನಡೆಸುತ್ತಿದ್ದಾರೆ.

ಮಗುಚಿಬಿದ್ದ ದೋಣಿ ಭಾಗಶಃ ಹಾನಿಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News