ಕೋಟೆಕಾರ್: ಮುಳ್ಳುಗುಡ್ಡೆ ಜಂಕ್ಷನ್ ನಲ್ಲಿ ಹೈ ಮಾಸ್ಟ್ ದೀಪ ಲೋಕಾರ್ಪಣೆ
Update: 2021-07-04 16:09 IST
ಉಳ್ಳಾಲ, ಜು.4: ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ 16 ನೇ ವಾರ್ಡ್ ಮುಳ್ಳುಗುಡ್ಡೆ ಜಂಕ್ಷನ್ 1.25 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಹೈ ಮಾಸ್ಟ್ ದೀಪವನ್ನು ಕೋಟೆಕಾರ್ ಪ. ಪಂ. ಕೌನ್ಸಿಲರ್ ದುಲೈಖಾ ಬಶೀರ್ ಲೋಕಾರ್ಪಣೆ ಗೊಳಿಸಿದರು.
ಕಾರ್ಯಕ್ರಮದಲ್ಲಿ ಎಸ್ ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬ್ಬಾಸ್ ಕಿನ್ಯ, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್ ಕೋಡಿಜಾಲ್, ಅಜ್ಜಿನಡ್ಕ ಸಮಿತಿಯ ಅಧ್ಯಕ್ಷ ಇರ್ಶಾದ್ ಅಜ್ಜಿನಡ್ಕ, ಉಪಾಧ್ಯಕ್ಷ ಬಶೀರ್ ಅಜ್ಜಿನಡ್ಕ, ತಲಪಾಡಿ ಗ್ರಾಮ ಪಂಚಾಯತ್ ಸದಸ್ಯ ಇಸ್ಮಾಯೀಲ್ ಟಿ. ಮೊದಲಾದವರು ಉಪಸ್ಥಿತರಿದ್ದರು.