×
Ad

ಕಾತ್ಯಾಯಿನಿ ಕುಂಜಿಬೆಟ್ಟುಗೆ ‘ನಾಗಶ್ರೀ’ ಕಾವ್ಯ ಪ್ರಶಸ್ತಿ

Update: 2021-07-04 20:24 IST

ಉಡುಪಿ, ಜು.4: ತುಮಕೂರಿನ ನಾಗಶ್ರೀ ಪ್ರತಿಷ್ಠಾನ ನೀಡುವ 2021ನೇ ಸಾಲಿನ ನಾಗಶ್ರೀ ಕಾವ್ಯ ಪ್ರಶಸಿಗೆ ಉಡುಪಿಯ ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರ ’ಅವನು ಹೆಣ್ಣಾಗಬೇಕು’ ಎಂಬ ಕವನ ಸಂಕಲನಕ್ಕೆ ಆಯ್ಕೆಯಾಗಿದೆ.

ಪ್ರಶಸ್ತಿಯು ಐದು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳ ಗೊಂಡಿದೆ. ಕಾತ್ಯಾಯಿನಿ ಕುಂಜಿಬೆಟ್ಟು ಅವರು ಪ್ರಸ್ತುತ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಮುಂದೆ, ತುಮಕೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗ ದೊಂದಿಗೆ ನಡೆಯಲಿದೆಯೆಂದು ಪ್ರಶಸ್ತಿ ಸಮಿತಿಯ ಸಂಚಾಲಕಿ ತೇಜಾವತಿ ಎಚ್.ಡಿ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News