×
Ad

ಉಡುಪಿ: ಸಹಾಯ್ ತಂಡದಿಂದ 125 ಕಾರ್ಯಕರ್ತರಿಗೆ ಪ್ರೋತ್ಸಾಹಧನ ವಿತರಣೆ

Update: 2021-07-04 20:26 IST

ಉಡುಪಿ, ಜು.4: ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ಅಧೀನದ ಸಹಾಯ್ ತಂಡದಿಂದ ಎಸ್‌ವೈಎಸ್, ಎಸ್ಸೆಸ್ಸೆಫ್ನ ಸಹಕಾರದೊಂದಿಗೆ ಕೋವಿಡ್-19 ಹಾಗೂ ಇನ್ನಿತರ ಸೇವೆಗಳಲ್ಲಿ ಸಕ್ರಿಯವಾಗಿ ಕಾರ್ಯಾಚರಣೆ ಮಾಡಿದ ಆರ್ಥಿಕ ವಾಗಿ ತೀರಾ ಹಿಂದುಳಿದ 125 ಕಾರ್ಯ ಕರ್ತರಿಗೆ ಮೂರು ಲಕ್ಷದಷ್ಟು ಆರ್ಥಿಕ ಸಹಾಯವನ್ನು ದಾನಿಗಳ ಸಹಕಾರದಿಂದ ನೀಡಲಾಯಿತು.

ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾಧ್ಯಕ್ಷ ಬಿ.ಎಸ್.ಎಫ್ ರಫೀಕ್ ಗಂಗೊಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಮೂಳೂರು ನೇತೃತ್ವದಲ್ಲಿ ಕಾಪು, ಕಾರ್ಕಳ, ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು ಹಾಗೂ ಹೆಬ್ರಿ ತಾಲೂಕುಗಳ ಅರ್ಹ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯಾಧ್ಯಕ್ಷ ಸುಬ್ಹಾನ್ ಅಹ್ಮದ್ ಹೊನ್ನಾಳ, ಉಪಾಧ್ಯಕ್ಷ ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಮುಹಮ್ಮದ್ ಗೌಸ್ ಕಾರ್ಕಳ, ಸಂಘಟನಾ ಕಾರ್ಯದರ್ಶಿ ಅಡ್ವಕೆಟ್ ಇಲ್ಯಾಸ್ ನಾವುಂದ, ಕಾರ್ಯದರ್ಶಿಗಳಾದ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಇಂಜಿನಿ ಯರ್ ನಾಸಿರ್ ಶೇಖ್ ಬೈಲೂರು, ಕೆಎಸ್ಎಂ ಮನ್ಸೂರ್ ಉಡುಪಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಬೀರ್ ಸಖಾಫಿ ಉಚ್ಚಿಲ, ರಾಜ್ಯ ಕಾರ್ಯದರ್ಶಿ ಎನ್.ಸಿ.ರಹೀಂ ಕಾರ್ಕಳ, ನಾಯಕರಾದ ಅಬ್ದುಲ್ಲತೀಫ್ ಫಾಳಿಲಿ ನಾವುಂದ, ಕೊಂಬಾಳಿ ಝುಹ್ರಿ, ಜೆ.ಮುಸ್ತಾಖ್ ಹೊನ್ನಾಳ, ಮನ್ಸೂರ್ ಮರವಂತೆ, ಸುಲೈಮಾನ್ ಬಜಗೋಳಿ, ಮುಹಿಯುದ್ದೀನ್ ನಿಟ್ಟೆ, ಇಕ್ಬಾಲ್ ಪಕೀರ್ಣಕಟ್ಟೆ, ಬಶೀರ್ ಮುಸ್ಲಿಯಾರ್ ಮಜೂರು, ಅಲ್ತಾಫ್ ಮಟಪಾಡಿ, ಅಕ್ಬರ್ ಅಲಿ ಬ್ರಹ್ಮಾವರ, ಇಮಾಂ ಸಾಹೇಬ್ ತೆಂಕಸಾಲಿ ಹೊನ್ನಾಳ, ಮುಸ್ತಫಾ ಬಂಗ್ಲಗುಡ್ಡೆ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News