ಹಾವು ಕಡಿತಕ್ಕೊಳಗಾಗಿ ಮೃತ್ಯು
Update: 2021-07-04 20:51 IST
ಮಣಿಪಾಲ, ಜು.4: ವಿಷಪೂರಿತ ಹಾವು ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜು.3ರಂದು ಸಂಜೆ ವೇಳೆ ಮೂಡು ಪೆರಂಪಳ್ಳಿಯ ಅಚಾರಿಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಅಚಾರಿಬೆಟ್ಟುವಿನ ಮೋತಿ ಡಿಸೋಜ(74) ಎಂದು ಗುರುತಿಸ ಲಾಗಿದೆ. ಇವರು ಮನೆ ಬಳಿಯ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ವಿಷ ಪೂರಿತ ನಾಗರಹಾವೊಂದು ಕಾಲಿನ ಬೆರಳಿಗೆ ಕಚ್ಚಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.