ಕೆನಡ: ವ್ಯಾಪಿಸುತ್ತಿರುವ ಉಷ್ಣಮಾರುತ; 170 ಸ್ಥಳಗಳಲ್ಲಿ ಕಾಡ್ಗಿಚ್ಚು

Update: 2021-07-04 17:01 GMT
photo:/twitter@ajplus 

ಒಟ್ಟಾವ (ಕೆನಡ), ಜು. 4: ಕೆನಡವನ್ನು ಉಷ್ಣಮಾರುತ ವ್ಯಾಪಿಸಿದ್ದು, ಶನಿವಾರ ಶುಷ್ಕ ವಾತಾವರಣದಿಂದಾಗಿ 170ಕ್ಕೂ ಅಧಿಕ ಸ್ಥಳಗಳಲ್ಲಿ ಕಾಡ್ಗಿಚ್ಚುಗಳು ಹೊತ್ತಿಕೊಂಡಿವೆ. ಅಪಾಯದಲ್ಲಿ ಸಿಲುಕಬಹುದಾದ ಜನರನ್ನು ಸ್ಥಳಾಂತರಿಸುವುದಕ್ಕಾಗಿ ಕೆನಡದ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

ಪಶ್ಚಿಮ ಭಾಗದ ಬ್ರಿಟಿಶ್ ಕೊಲಂಬಿಯದಲ್ಲಿ ಕನಿಷ್ಠ 174 ಕಾಡ್ಗಚ್ಚುಗಳು ಸಕ್ರಿಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ 78 ಪ್ರಕರಣಗಳು ಕಳೆದ ಎರಡು ದಿನಗಳಲ್ಲಿ ಹೊತ್ತಿಕೊಂಡಿವೆ. ಇವುಗಳ ಪೈಕಿ ಹೆಚ್ಚಿನವುಗಳು ತೀವ್ರ ಗುಡುಗು-ಮಿಂಚು ಸಹಿತ ಮಳೆಯಿಂದಾಗಿ ಹೊತ್ತಿಕೊಂಡಿವೆ.

‘‘ನಿನ್ನೆ ನಾವು ಸುಮಾರು 12,000 ಸಿಡಿಲು ಬಡಿದ ಪ್ರಕರಣಗಳನ್ನು ನೋಡಿದ್ದೇವೆ’’ ಎಂದು ಬ್ರಿಟಿಶ್ ಕೊಲಂಬಿಯ ಅರಣ್ಯ ಇಲಾಖೆ ನಿರ್ದೇಶಕ ಕ್ಲಿಫ್ ಚಾಪ್‌ಮನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News