×
Ad

ತುಳುಕೂಟದ ಸ್ಥಾಪಕ ಕಾರ್ಯದರ್ಶಿ ವಿಠಲ ಪುತ್ತೂರು ನಿಧನ

Update: 2021-07-05 22:53 IST

ಪುತ್ತೂರು : ಪುತ್ತೂರು ತುಳು ಕೂಟದ ಸ್ಥಾಪಕ ಕಾರ್ಯದರ್ಶಿ, ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ, ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬಳಕ್ಕ ನಿವಾಸಿ ದಿ. ಬಾಬಣ್ಣ ಅವರ ಪುತ್ರ ಯಂ. ವಿಠಲ ಪುತ್ತೂರು ಅವರು ಸ್ವಗೃಹದಲ್ಲಿ ನಿಧನರಾದರು.

ಪುತ್ತೂರಿನಲ್ಲಿ ಮೊದಲ ದ್ವಿಚಕ್ರ ವಾಹನ ದುರಸ್ತಿ ಗ್ಯಾರೇಜ್ ಪ್ರಾಂರಭಿಸಿದ್ದ ಅವರು ಚಿತ್ರಕಲೆ, ಶಿಲ್ಪಕಲೆ, ಕೈಗಾರಿಕೆ, ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ  ಕೆಲಸ ಮಾಡಿದ್ದರು.

ತುಳು ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದ ವಿಠಲ ಅವರು ತುಳುವಿನಲ್ಲಿ ಪುಸ್ತಕಗಳು ಮತ್ತು ಕವನಗಳನ್ನು ಬರೆದಿದ್ದಾರೆ. ತುಳುವೆರೆ ತುಡರ್ ಎಂಬ ಮಾಸ ಪತ್ರಿಕೆಯ ಹರಿಕಾರರಾಗಿ ಸುಮಾರು 25 ವರ್ಷಗಳ ಕಾಲ ಪತ್ರಿಕೆ ಮುನ್ನಡೆಸಿದ್ದರು. ನಾಟಕ ಕಲಾವಿದರಾಗಿದ್ದ ಅವರು ಹಲವು ನಾಟಕಗಳಲ್ಲಿ ನಟಿಸಿದ್ದರು. ಇವರಿಗೆ ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News