ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ
Update: 2021-07-06 22:45 IST
ಭಟ್ಕಳ: ತಾಲೂಕಿನ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ಗ್ರಾಮದ ಎಡಬಡ್ರು ರಸ್ತೆ ರೈಲ್ವೇ ಬ್ರಿಡ್ಜ್ ಹತ್ತಿರ ಮಾರಾಟ ಮಾಡುವ ಉದ್ದೇಶದಿಂದ 518 ಗ್ರಾಂ ತೂಕದ ಗಾಂಜಾವನ್ನು ಇಟ್ಟುಕೊಂಡಿದ್ದ ಇಬ್ಬರು ಆರೋಪಿಗಳನ್ನು ಗಾಂಜಾ ಸಹಿತ ಬಂಧಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಖಚಿತ ಮಾಹಿತಿಯ ಮೇರೆಗೆ ಮುರ್ಡೇಶ್ವರ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಗಳು ಬೈಲೂರು ರೈಲ್ವೇ ಬ್ರಿಡ್ಜ್ ಬಳಿಯಲ್ಲಿ ಹಡವಿನಕೋಣೆ ಶಿರೂರಿನವರಾದ ಮುಹಮ್ಮದ್ ಝುಹೇರ್ (22) ಹಾಗೂ ಅಫ್ನಾನ್ ಅಹಮ್ಮದ್ (19) ಎನ್ನುವವರನ್ನು ವಶಕ್ಕೆ ಪಡೆದು ವಿಚಾರಿಸುವಾಗ ಗಾಂಜಾ ಮರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಇಟ್ಟುಕೊಂಡಿರುವುದು ತಿಳಿದು ಬಂದಿದೆ. ತಕ್ಷಣ ಅವರನ್ನು ದಸ್ತಗಿರಿ ಮಾಡಿದ್ದು ಪ್ರಕರಣವನ್ನು ಎ.ಎಸ್.ಐ. ವರದರಾಜ ವಿ.ಗುನಗಾ ಅವರು ದಾಖಲಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.