ಎಸ್‌ವೈಎಸ್ ಮುಡಿಪು ಘಟಕದಿಂದ ಸ್ವಚ್ಛತಾ ಕಾರ್ಯಕ್ರಮ

Update: 2021-07-06 17:44 GMT

ಕೊಣಾಜೆ, ಜು.6: ಎಸ್‌ವೈಎಸ್ ಮುಡಿಪು ಘಟಕದಿಂದ ಬಾಳೆಪುಣಿ ಮತ್ತು ಕುರ್ನಾಡು ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವು ಮಂಗಳವಾರ ನಡೆಯಿತು.

ಈ ಸಂದರ್ಭ ಮಾತನಾಡಿದ ಎಸ್‌ವೈಎಸ್ ಕಾರ್ಯದರ್ಶಿ ಬಶೀರ್ ಮುಡಿಪು ಸ್ವಚ್ಛತೆಯನ್ನು ಇಸ್ಲಾಂ ಬಲವಾಗಿ ಪ್ರತಿಪಾದಿಸಿದೆ. ಹಾಗಾಗಿ ಮನೆ, ಪರಿಸರ, ಸಾರ್ವಜನಿಕ ಪ್ರದೇಶದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ಮುಸಲ್ಮಾನನ ಕರ್ತವ್ಯವಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಆದರೆ, ಎಸ್‌ವೈಎಸ್ ಕಾರ್ಯಕರ್ತರು ಬೀದಿಗಿಳಿದು ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಎಸ್‌ವೈಎಸ್ ಮುಡಿಪು ಘಟಕಾಧ್ಯಕ್ಷ ಅಬ್ಬು ಹಾಜಿ ಮದ್ಯನಡ್ಕ, ಹಿಸಾಬ ಅಧ್ಯಕ್ಷ ಅಮೀರ್, ಮುಹಮ್ಮದಾಲಿ ಉಸ್ತಾದ್, ಸಾಂತ್ವನ ಕಾರ್ಯದರ್ಶಿ ಎಂಎಂಕೆ ಮುಡಿಪು, ಸಾಂಬಾರ್ ತೋಟ ಅಧ್ಯಕ್ಷ ಹಸನ್ ಹಾಜಿ, ಎಸ್‌ಎಂಎ ಅಧ್ಯಕ್ಷ ಯೂಸುಫ್ ಪಾನೇಲ, ಎಸ್‌ವೈಎಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್.ಎಸ್.ಮೂಸಾ ಹಾಜಿ, ಉಮ್ಮರ್ ಮುರ್ಕುಂಜ, ನಝೀರ್ ಮುಡಿಪು, ಲತೀಫ್ ಮದನಿ ವಳಾಲ್, ಬಶೀರ್ ಹಾಜಿ ಸಿ.ಟಿ., ಹಮೀದ್ ಕಿಲಾರಿ, ಲತೀಫ್ ಬೋಳಿಯಾರ್, ಎಸ್‌ವೈಎಸ್ ಮಾಜಿ ಅಧ್ಯಕ್ಷ ಎಸ್.ಕೆ.ಅಬ್ದುಲ್ ಖಾದರ್ ಹಾಜಿ, ಮುಖಂಡರಾದ ಮುಹಮ್ಮದ್ ಪರಪ್ಪು, ಹಮೀದ್ ಮುಡಿಪು, ಅಲಿ ಮುದುಂಗಾರು, ಫಝಲ್ ಮುಡಿಪು, ಮುಸ್ತಫಾ ಸಅದಿ ಬಾಳೆಪುಣಿ, ಅಬ್ದುಲ್ಲಾ ಮುಡಿಪು, ರಾಫಿ ಕಣ್ಣೂರು, ರಝಾಕ್ ತಾಜ್, ಹಬೀಬ್ ಇರಾ, ಅಝೀಝ್ ಎಚ್.ಕಲ್, ಅಝೀಝ್ ಸಖಾಫಿ ಪರಪ್ಪು, ಯಾಕೂಬ್ ಮುದುಂಗಾರು, ಯಾಕೂಬ್ ಸಖಾಫಿ ಪರಪ್ಪು, ಅಬೂಬಕರ್ ಸಖಾಫಿ ಕಡ್ವಾಯಿ, ಉಸ್ಮಾನ್ ಮುಡಿಪು, ಸಮೀರ್ ಗರಡಿಪಳ್ಳ, ಉಸ್ಮಾನ್ ಸಅದಿ ಪರಪ್ಪು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News