ಜು.10ರಿಂದ 30ರ ನಡುವೆ ಸ್ಪೈಸ್ ಜೆಟ್ ನಿಂದ 42 ನೂತನ ವಿಮಾನಯಾನಗಳ ಆರಂಭ

Update: 2021-07-08 14:04 GMT

ಹೊಸದಿಲ್ಲಿ,ಜು.8: ಸ್ಪೈಸ್ ಜೆಟ್ ಜು.10ರಿಂದ 30ರ ನಡುವೆ 42 ಹೊಸ ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಆರಂಭಿಸಲಿದೆ ಎಂದು ಅಧಿಕೃತ ಹೇಳಿಕೆಯು ಗುರುವಾರ ತಿಳಿಸಿದೆ. ಸೂರತ್-ಜಬಲಪುರ ಮತ್ತು ಸೂರತ್-ಪುಣೆ ಮಾರ್ಗಗಳಲ್ಲಿ ಯಾನಗಳನ್ನು ಆರಂಭಿಸುವುದಾಗಿ ಕಂಪನಿಯು ತಿಳಿಸಿದೆ.

‌ಸೂರತ್-ಜೈಪುರ, ಹೈದರಾಬಾದ್-ಬೆಂಗಳೂರು, ಗ್ವಾಲಿಯರ್-ಅಹ್ಮದಾಬಾದ್ ಮತ್ತು ಮುಂಬೈ-ಪುಣೆ ನಡುವೆ ಯಾನಗಳನ್ನೂ ಕಂಪನಿಯು ಆರಂಭಿಸಲಿದೆ.

ಗ್ವಾಲಿಯರ್ನಿಂದ ಅಹ್ಮದಾಬಾದ್,ಮುಂಬೈ ಮತ್ತು ಪುಣೆಗಳಿಗೆ ತಡೆರಹಿತ ವಿಮಾನಯಾನಗಳನ್ನೂ ಕಂಪನಿಯು ಪ್ರಾರಂಭಿಸಲಿದೆ. ಇದೇ ಮೊದಲ ಬಾರಿಗೆ ಕೋಲ್ಕತಾ ಮತ್ತು ಪಾಟ್ನಾ, ಸೂರತ್ ಮತ್ತು ಪಾಟ್ನಾ, ಅಹ್ಮದಾಬಾದ್ ಮತ್ತು ಉದಯಪುರ ಹಾಗೂ ಬೆಂಗಳೂರು-ಕೊಚ್ಚಿ ಮಾರ್ಗಗಳಲ್ಲಿ ತನ್ನ ಯಾನಗಳನ್ನು ಆರಂಭಿಸಿರುವುದಾಗಿ ಕಂಪನಿಯು ತಿಳಿಸಿದೆ.

ಕೋವಿಡ್ ಲಾಕ್ಡೌನ್ನಿಂದಾಗಿ ಕಳೆದ ವರ್ಷದ ಮಾ.25ರಿಂದ ಮೇ 24ರವರೆಗೆ ಎರಡು ತಿಂಗಳು ದೇಶಿಯ ವಿಮಾನಯಾನಗಳು ಸ್ಥಗಿತಗೊಂಡಿದ್ದವು. ಜೂನ್ 2020ರಿಂದ ದೇಶಿಯ ವಾಯುಯಾನ ಕ್ಷೇತ್ರವು ಚೇತರಿಕೆಯ ಹಾದಿಯಲ್ಲಿತ್ತಾದರೂ ಈ ವರ್ಷದ ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಹಾವಳಿಯೆಬ್ಬಿಸಿದ್ದ ಕೋವಿಡ್ ಎರಡನೇ ಅಲೆಯು ಪೆಟ್ಟು ನೀಡಿತ್ತು.
ಸದ್ಯ ಭಾರತೀಯ ವಿಮಾನಯಾನ ಸಂಸ್ಥೆಗಳು ಪ್ರತಿದಿನ ಸುಮಾರು 1,400 ದೇಶಿಯ ಯಾನಗಳನ್ನು ನಿರ್ವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News