×
Ad

ಕಾಕ೯ಳ : ವಂ| ಫಾ| ಜೋಸ್ವಿ ಫೆನಾ೯ಂಡಿಸ್ ರಿಗೆ ಬೀಳ್ಕೊಡುಗೆ

Update: 2021-07-09 18:37 IST

ಕಾಕ೯ಳ: ಚರ್ಚ್ ಧರ್ಮಗುರುಗಳು ಹಾಗೂ ಕಾಕ೯ಳ ವಲಯದ ಆದ್ಯಾತ್ಮಿಕ ಗುರುಗಳಾದ ವಂದನೀಯ ಜೋಸ್ವಿ ಫೆನಾ೯ಂಡಿಸ್ ಇವರು ಕಾಕ೯ಳದಲ್ಲಿ  ಕಳೆದ 6 ವರ್ಷಗಳಿಂದ ಸೇವೆಗೈದಿದ್ದು ಇದೀಗ ಎರ್ಮಾಳ್ ಚರ್ಚಿಗೆ ವರ್ಗಾವಣೆ ಆಗುವ ಸಂದರ್ಭದಲ್ಲಿ ಅವರನ್ನು ಬೀಳ್ಕೊಡುವ ಕಾರ್ಯಕ್ರಮವನ್ನು ಕಾಕ೯ಳ ಚರ್ಚ್ ಹಾಲಿನಲ್ಲಿ ಗುರುವಾರ ನಡೆಸಲಾಯಿತು. 

ಕಾಕ೯ಳ ಚರ್ಚಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿ, ಜನರ ಮನಗೆದ್ದ ಅವರಿಗೆ ಶಾಲು, ಫಲಪುಷ್ಪ ಹಾರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಚಚ್೯ನ ಪಾಲನಾ ಮಂಡಲಿಯ ಉಪಾಧ್ಯಕ್ಷ ಆಂಟನಿ ಆರಾನ್ಹ ಸ್ವಾಗತಿಸಿದರು. ಸಿಸ್ಟರ್ ಸುಪೀರಿಯರ್ ಪೇಟ್ರಿನಾ ಧರ್ಮಗುರುಗಳ ಬಗ್ಗೆ ಮಾತನಾಡಿದರು. ಪಾಲನಾ ಮಂಡಲಿಯ ಕಾಯ೯ದಶಿ೯ ಲವೀನಾ ಪಿರೇರಾ ವಂದಿಸಿದರು. ನೇವಿಲ್ ಡಿ'ಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News