×
Ad

ಜು.10: ‘ಪಾಲುಂ ತೇನ್ 2021’ ಬ್ಯಾರಿ ಸಂಗೀತ ಕಾರ್ಯಕ್ರಮ

Update: 2021-07-09 20:01 IST

ಮಂಗಳೂರು, ಜು.9: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ದ.ಕ. ಮತ್ತು ಉಡುಪಿ ಜಿಲ್ಲಾ ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ ಸಹಕಾರದಲ್ಲಿ ಜು.10ರ ರಾತ್ರಿ 7ರಿಂದ 10 ಗಂಟೆಯವರೆಗೆ ‘ಬ್ಯಾರಿ ಪಾಲುಂ ತೇನ್-2021’ ಬ್ಯಾರಿ ಸಂಗೀತ ಲೈವ್ ಕಾರ್ಯಕ್ರಮ ನಡೆಯಲಿದೆ.

ಬಹುಭಾಷಾ ಗಾಯಕ ಮರ್ಹೂಂ ಶರೀಫ್ ಬೆಳ್ಳಾರೆಯ ಸ್ಮರಣಾರ್ಥ ನಡೆಯುವ ಈ ಕಾರ್ಯಕ್ರಮವನ್ನು ಅಕಾಡಮಿಯ ಯುಟ್ಯೂಬ್ ಮತ್ತು ಫೇಸ್‌ಬುಕ್ ಚಾನೆಲ್ ಮೂಲಕ ಪ್ರಸಾರ ಮಾಡಲಿದೆ. ಗಾಯಕರಾದ ಸಮೀರ್ ಮುಲ್ಕಿ, ಇಬ್ರಾಹಿಂ ಬಾತಿಷಾ, ಮಲ್ಲಿಕಾ ಶೆಟ್ಟಿ, ಸಮದ್ ಗಡಿಯಾರ್, ಅಬ್ದುಲ್ ಸಮದ್ ಕಾಟಿಪಳ್ಳ ಭಾಗವಹಿಸಲಿದ್ದಾರೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News