×
Ad

ಅಫ್ಘಾನ್-ತಜಕಿಸ್ತಾನ ಗಡಿಯ ಬಹುಪಾಲು ಭಾಗ ತಾಲಿಬಾನ್ ನಿಯಂತ್ರಣದಲ್ಲಿ: ರಶ್ಯ

Update: 2021-07-09 20:05 IST

ಮಾಸ್ಕೋ, ಜು. 9: ಅಫ್ಘಾನಿಸ್ತಾನ-ತಜಿಕಿಸ್ತಾನ ಗಡಿಯ ಮೂರನೇ ಎರಡರಷ್ಟು ಭಾಗ ತಾಲಿಬಾನ್ ನಿಯಂತ್ರಣದಲ್ಲಿದೆ ಎಂದು ರಶ್ಯ ಶುಕ್ರವಾರ ಹೇಳಿದೆ ಹಾಗೂ ಸಂಯಮ ಪ್ರದರ್ಶಿಸುವಂತೆ ಅಫ್ಘಾನಿಸ್ತಾನದ ಎಲ್ಲ ಪಕ್ಷಗಳನ್ನು ಒತ್ತಾಯಿಸಿದೆ.

‌‘‘ಅಫ್ಘಾನ್-ತಜಿಕ್ ಗಡಿಯಲ್ಲಿನ ಉದ್ವಿಗ್ನತೆಯಲ್ಲಿ ತೀವ್ರ ಏರಿಕೆಯಾಗಿರುವುದನ್ನು ನಾವು ಗಮನಿಸಿದ್ದೇವೆ. ಗಡಿ ಜಿಲ್ಲೆಗಳ ಹೆಚ್ಚಿನ ಭಾಗವನ್ನು ತಾಲಿಬಾನ್ ಕ್ಷಿಪ್ರವಾಗಿ ಆಕ್ರಮಿಸಿಕೊಂಡಿದೆ. ಪ್ರಸಕ್ತ ಅದು ಗಡಿಯ ಮೂರನೇ ಎರಡು ಭಾಗವನ್ನು ನಿಯಂತ್ರಿಸುತ್ತಿದೆ’’ ಎಂದು ರಶ್ಯದ ವಿದೇಶ ಸಚಿವಾಲಯದ ವಕ್ತಾರೆ ಮರಿಯಾ ಝಖರೋವ ಹೇಳಿದರು. ಸಂಬಂಧಪಟ್ಟ ಎಲ್ಲ ಪಕ್ಷಗಳು ಸಂಯಮ ತೋರಿಸಬೇಕೆಂದು ರಶ್ಯ ಬಯಸುತ್ತದೆ ಎಂದರು.

ತನ್ನ ಮಿತ್ರ ದೇಶ ತಜಿಕಿಸ್ತಾನದ ಮೇಲಿನ ಆಕ್ರಮಣವನ್ನು ತಡೆಯಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲು ರಶ್ಯ ಸಿದ್ಧವಾಗಿದೆ ಎಂದು ಅವರು ಹೇಳಿದರು ಹಾಗೂ ದೇಶದಿಂದ ಹೊರಗೆ ಉದ್ವಿಗ್ನತೆ ಹರಡುವುದನ್ನು ತಡೆಯುವಂತೆ ಎಲ್ಲ ಪಕ್ಷಗಳಿಗೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News