×
Ad

​ಜು.10: ದ.ಕ. ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಲಸಿಕಾ ಶಿಬಿರ

Update: 2021-07-09 20:45 IST

ಮಂಗಳೂರು, ಜು.9: ದ.ಕ.ಜಿಲ್ಲೆಯಲ್ಲಿ ಜು.10ರಂದು ವಿವಿಧ ಕಾಲೇಜಿನಲ್ಲಿ ನೋಂದಾಯಿಸಿರುವ ಪದವಿ ವಿದ್ಯಾರ್ಥಿಗಳು/ಬೋಧಕ ಮತ್ತು ಬೊಧಕೇತರ ಸಿಬ್ಬಂದಿಗಳಿಗೆ ಕೋವಿಡ್ ಪ್ರತಿರೋಧ ಲಸಿಕಾ ಶಿಬಿರ ನಡೆಯಲಿದೆ.

ಫಲಾನುಭವಿಗಳು ಕಾಲೇಜಿನ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಅಥವಾ ಸರಕಾರ ನಿಗದಿಪಡಿಸಿದ ಇತರ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.

ಮಂಗಳೂರು ತಾಲೂಕಿನ ಶ್ರೀದೇವಿ ಕಾಲೇಜು ಕೆಂಜಾರ್, ಎಂ.ಆರ್. ಪೂಂಜಾ ಐಟಿಐ ತಪೋವನ ಎಸ್ಟೋಡಿ ಕೆಮ್ರಾಲ್. ಸಹ್ಯಾದ್ರಿ ಕಾಲೇಜು ಅಡ್ಯಾರ್, ಬದ್ರಿಯಾ ಕಾಲೇಜು ಬಂದರು, ಸಂತ ಆ್ಯಗ್ನೆಸ್ ಕಾಲೇಜು ಬೆಂದೂರು, ಶ್ರೀನಿವಾಸ್ ಕಾಲೇಜು ಮುಕ್ಕ, ಸಂತ ಆ್ಯನ್ಸ್ ಆ್ಯನ್ಸ್ ಕಾಲೇಜು ಮಂಗಳೂರು, ಬಲ್ಮಠ ಮಹಿಳಾ ಕಾಲೇಜು, ಗೋವಿಂದದಾಸ್ ಕಾಲೇಜು ಸುರತ್ಕಲ್, ಎ.ಜೆ. ಇಂಜಿನಿಯರಿಂಗ್ ಕಾಲೇಜು ಕೂಳೂರು, ಸಿಟಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಶಕ್ತಿನಗರ ಇಲ್ಲಿ ಶಿಬಿರ ನಡೆಯಲಿದೆ.

ಜಿಲ್ಲೆಯಲ್ಲಿ ನಡೆಯುವ ಇತರ ಲಸಿಕಾ ಶಿಬಿರಕ್ಕೆ ಸಂಬಂಧಿಸಿದಂತೆ ಮಂಗಳೂರು ತಾಲೂಕಿನ 2ನೇ ಡೋಸ್ ಶಿಬಿರವು ಆಯ್ದ ಆರೋಗ್ಯ ಕೇಂದ್ರದಲ್ಲಿ ನೀಡಲಾಗುವುದು. ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಇಂದಬೆಟ್ಟು, ನೆರಿಯಾ, ಚಾರ್ಮಡಿ, ಧರ್ಮಸ್ಥಳ, ವೇಣೂರು, ಪಡಂಗಡಿ, ಹತ್ಯಡ್ಕ, ಕೊಕ್ಕಡ, ನಾರಾವಿ, ನೆರಿಯ ಕೇಂದ್ರಗಳಲ್ಲಿ ಕೋವಿಶೀಲ್ಡ್ ಎರಡನೇ ಡೋಸ್ ಲಭ್ಯವಿದೆ. ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಶಿಬಿರವು ನಡೆಯಲಿದೆ.

ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ 2ನೇ ಡೋಸ್ ಲಸಿಕಾ ಫಲಾನುಭವಿಗಳಿಗೆ ಹಾಗೂ ಎನ್‌ಆರ್‌ಐ ಫಲಾನುಭವಿಗಳಿಗೆ ಮಾತ್ರ ಲಸಿಕೆಯನ್ನು ನೀಡಲಾಗುವುದು.

ನಗರದ ಕದ್ರಿ ಶಿವಭಾಗ್‌ನಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲಿ ಎರಡನೇ ಡೋಸ್ ಲಸಿಕಾ ಫಲಾನುಭವಿಗಳು, ಕಾಲೇಜು ಶಿಬಿರದಲ್ಲಿ ಲಸಿಕೆ ಪಡೆಯದ ವಿದ್ಯಾರ್ಥಿಗಳು ಇಎಸ್‌ಐ ಆಸ್ಪತ್ರೆಯಲ್ಲಿ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News