×
Ad

​ವೃದ್ಧನಿಗೆ ಹಲ್ಲೆ : ಆರೋಪ

Update: 2021-07-09 20:49 IST

ಮಂಗಳೂರು, ಜು.9: ನಗರದ ಬೋಳೂರು ನಿವಾಸಿ ರವೀಂದ್ರ (72) ಎಂಬವರಿಗೆ ಅವರ ತಂಗಿಯ ಮಗ ರಕ್ಷಿತ್ (31) ಎಂಬಾತ ಹಲ್ಲೆ ನಡೆಸಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜು.8ರಂದು ಮಧ್ಯಾಹ್ನ 2:30ರ ವೇಳೆಗೆ ವೈಯಕ್ತಿಕ ದ್ವೇಷದಿಂದ ರವೀಂದ್ರರಿಗೆ ತನ್ನ ಮನೆಯಲ್ಲೇ ಇರುವ ತಂಗಿಯ ಮಗ ರಕ್ಷಿತ್ ಹಲ್ಲೆಗೈದು, ನಿಂದನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News