ಮೂಡುಬಿದಿರೆ: ರಾಣಿ ಅಬ್ಬಕ್ಕ ಬಿದಿರು ಉದ್ಯಾನವನ ಲೋಕಾರ್ಪಣೆ

Update: 2021-07-09 17:09 GMT

ಮೂಡುಬಿದಿರೆ: ಆನೆಗಳ ಆಹಾರವಾಗುವ ಬಿದಿರಿನ ತಳಿಗಳನ್ನು ಕಾಡಿನಂಚಿನಲ್ಲಿ ನೆಟ್ಟರೆ ಆನೆಗಳು ನಾಡಿಗೆ ಬರುವ ಪ್ರಮೇಯ ತಪ್ಪುತ್ತದೆ. ಅಂತಹ ಬಿದಿರಿನ ತಳಿಗಳನ್ನು ಬೆಳೆಸುವ ಅವಶ್ಯಕತೆಯಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಒಂಟಿಕಟ್ಟೆಯ ಕಡಲ ಕೆರೆ ನಿಸರ್ಗಧಾಮದ ಸಾಲುಮರ ತಿಮ್ಮಕ್ಕ ಸಸ್ಯೋದ್ಯಾನವನ  ಆವರಣದಲ್ಲಿ ರಾಣಿ ಅಬ್ಬಕ್ಕ ಬಿದಿರು ಉದ್ಯಾನವನವನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪರಿಸರವನ್ನು ನಾವು ಸಂರಕ್ಷಿಸಿದಲ್ಲಿ ಶುದ್ಧ ಗಾಳಿ, ನೀರನ್ನು ಖರೀದಿಸುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮವು ಪ್ರಾಕೃತಿಕ ಆಕರ್ಷಣೆಗಳಿರುವ ವಿಶಿಷ್ಟ ತಾಣವಾಗಿದೆ. ಪರಿಸರ ಸಂರಕ್ಷಣೆಯ ಜೊತೆಗೆ ಪರಂಪರೆಯ ಉಳಿವು ಇಲ್ಲಿಯಾಗುತ್ತಿರುವುದು ಮಾದರಿ ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆವಹಿಸಿ ಕಡಲಕೆರೆಯ ಸಮಗ್ರ ಅಭಿವೃದ್ಧಿಯ ಚಿತ್ರಣವನ್ನು ನೀಡಿದರು. ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಮೂಡಾ ಅಧ್ಯಕ್ಷ ಮೇಘನಾದ್ ಶೆಟ್ಟಿ, ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್, ಕುಂದಾಪುರ ವಿಭಾಗ ಉಪವಲಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಕಾರ್ಕಳ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ, ವಲಯ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್, ವಲಯ ಅರಣ್ಯ ಅಧಿಕಾರಿ ಪ್ರಕಾಶ್ ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಮತ್ತಿತರರು ಉಪಸ್ಥಿತರಿದ್ದರು. 

ಕಡಲಕೆರೆಗೆ ಸಚಿವರು 20 ಸಾವಿರ ಮೀನು ಮರಿಗಳನ್ನು ಬಿಟ್ಟು, ದೋಣಿ ವಿಹಾರಕ್ಕೆ ಚಾಲನೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News