ದ.ಕ.ಜಿಲ್ಲೆ: ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಅಧ್ಯಕ್ಷರ ಪದಗ್ರಹಣ
ಮಂಗಳೂರು, ಜು.10: ಸಹಬಾಳ್ವೆ, ಸೌಹಾರ್ದತೆಯಂತಹ ಉದಾತ್ತ ಆದರ್ಶಗಳೊಂದಿಗೆ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕ ಕಾರ್ಯ ನಿರ್ವಹಿಸಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ 16 ಬ್ಲಾಕ್‌ಗಳ ನೂತನ ಅಧ್ಯಕ್ಷರುಗಳಿಗೆ ಶನಿವಾರ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ನೇಮಕಾತಿ ಆದೇಶ ಪತ್ರವನ್ನು ನೀಡಿ ಅವರು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಯು.ಟಿ. ಖಾದರ್ ನೇಮಕಾತಿ ಆದೇಶವನ್ನು ನೀಡಿ ಅಭಿನಂದಿಸಿದರು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಜಿ.ಎ. ಬಾವ, ಪಕ್ಷದ ಮುಖಂಡರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಸದಾಶಿವ ಉಳ್ಳಾಲ, ಶಶಿಧರ್ ಹೆಗ್ಡೆ, ಅಬ್ಬಾಸ್ ಅಲಿ, ಎನ್.ಎಸ್. ಕರೀಂ, ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲೀಂ, ಸುಧೀರ್ ಕುಮಾರ್ ಶೆಟ್ಟಿ, ಅಬ್ದುರ್ರವೂಫ್, ಲಾರೆನ್ಸ್ ಡಿಸೋಜ, ನೂರುದ್ದೀನ್ ಸಾಲ್ಮರ, ಡೆನಿಸ್ ಡಿಸೋಜ, ಶರೀಫ್ ಕಡಬ, ತಾಜ್ ಮುಹಮ್ಮದ್, ಲತೀಫ್ ಕಂದಕ್, ಅಶ್ರಫ್ ಬಜಾಲ್, ನವೀನ್ ಡಿಸೋಜ, ಶಂಶುದ್ದೀನ್ ಎಚ್‌ಬಿಟಿ, ಶಬೀರ್ ಎಸ್. ಉಪಸ್ಥಿತರಿದ್ದರು. ಹುಸೈನ್ ಬೋಳಾರ ವಂದಿಸಿದರು.