ಜನಸೇವಾ ಸೌಹಾರ್ದ ಸಹಕಾರಿ ಅಧ್ಯಕ್ಷರಾಗಿ ಅಝೀಝ್ ಉದ್ಯಾವರ
Update: 2021-07-10 20:27 IST
ಉಡುಪಿ, ಜು.10: ಉಡುಪಿ ಜನಸೇವಾ ಸೌಹಾರ್ದ ಸಹಕಾರಿ ನಿಯಮಿತ ಇದರ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಉದ್ಯಾವರ ಮತ್ತು ಉಪಾಧ್ಯಕ್ಷರಾಗಿ ಹುಸೇನ್ ಕೋಡಿಬೆಂಗ್ರೆ ಆಯ್ಕೆಯಾಗಿದ್ದಾರೆ.
ಸಹಕಾರಿಯ ನಿರ್ದೇಶಕರಾಗಿ ಅಬ್ದುಲ್ ರಹೀಮ್, ಇರ್ಷದುಲ್ಲಾ ಆದೀಲ್, ಝಕಾರಿಯಾ ಬೆಂಗ್ರೆ, ಯಾಸೀನ್, ಜಮಾಅಲ್ ಅಹ್ಮದ್ ಬಿ.ಕೆ, ಶೆರೀನ್ ಅಬ್ದುಲ್ ಲತೀಫ್, ಫಹೀನಾ ಮುಶರಿಫನ್ ನಾಕುದಾ ಆಯ್ಕೆ ಯಾಗಿದ್ದಾರೆ.
ಚುನಾವಣಾ ನಿರ್ವಾಹಣಾಧಿಕಾರಿಯಾಗಿ ಕೆ.ಜಯರಾಮ್ ಚುನಾವಣೆಯನ್ನು ನಡೆಸಿಕೊಟ್ಟದ್ದಾರೆ ಎಂದು ಸಂಸ್ಥೆಯ ನಿರ್ವಾಹಣಾಧಿಕಾರಿ ಪ್ರಶಾಂತ್ ಮೊಗವೀರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.