ಉಡುಪಿ ಸಹಾಯ್ ತಂಡದಿಂದ ಪಡಿತರ ಕಿಟ್-ಜಾಕೆಟ್ ವಿತರಣೆ
ಉಡುಪಿ, ಜು.10: ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ಸಹಾಯ್ ತಂಡದಿಂದ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರಾಯೋಗಿಕತ್ವದಲ್ಲಿ ಪಡಿತರ ಕಿಟ್ ಹಾಗೂ ಜಾಕೆಟ್ ವಿತರಣಾ ಕಾರ್ಯ ಕ್ರಮವು ಹೂಡೆ ದಾರುಸ್ಸಲಾನಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಬಿಎಸ್‌ಎಫ್ ರಫೀಕ್ ಗಂಗೊಳ್ಳಿ ವಹಿಸಿ ದ್ದರು. ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಶಬೀರ್ ಸಖಾಫಿ ಉಚ್ಚಿಲ ದುವಾ ನೆರ ವೇರಿಸಿದರು. ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯ, ಸಹಾಯ್ ತಂಡದ ಕೋ-ಓಡಿನೆಟರ್ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಮಾತನಾಡಿದರು
ಕಾಪು ತಾಲೂಕಿನ ಕಿಟ್ ಕಾರ್ಯದರ್ಶಿ ವೈ.ಎಂ.ಇಲ್ಯಾಸ್ ಕಟಪಾಡಿ, ಸಹಾಯ್ ತಂಡದ ಜಿಲ್ಲಾ ಕಂಟ್ರೋಲರ್ ಮಜೀದ್ ಹನೀಫಿ, ನಾಯಕರಾದ ಫಾರೂಖ್ ಆರ್ ಕೆ, ಮುಸ್ತಫಾ ಬಂಗ್ಲಗುಡ್ಡೆ,, ಅಬ್ದುಲ್ ಮಜೀದ್ ಕಟಪಾಡಿ, ಇಮಾ್ರನ್ ಬಶೀರ್ ಕಾಪು ಉಪಸ್ಥಿತರಿದ್ದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾದ ಬಶೀರ್ ಉಸ್ತಾದ್ ಮಜೂರು ಅವರನ್ನು ಸನ್ಮಾನಿಸಲಾಯಿತು.
ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಮೂಳೂರು ಸ್ವಾಗತಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಸುಬ್ಹಾನ್ ಅಹ್ಮದ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ದಾರುಸ್ಸಲಾಂ ವಂದಿಸಿದರು