ಕುಕ್ಕಾಜೆ : ಎಸ್ ಎಸ್ ಎಫ್ ಹೆಲ್ಪ್ ಲೈನ್ ವತಿಯಿಂದ ಸ್ವಚ್ಛತೆ, ಶ್ರಮದಾನ

Update: 2021-07-11 17:30 GMT

ಕೊಣಾಜೆ: ಇರಾ ಗ್ರಾಮದ ಕುಕ್ಕಾಜೆ ಕಾಪಿಕಾಡು ಎಸ್ ಎಸ್ ಎಫ್ ಹೆಲ್ಪ್ ಲೈನ್ ಸಂಘಟನೆಯ ವತಿಯಿಂದ ಕಾಪಿಕಾಡು ಮದರಸದ ವಠಾರ ದಲ್ಲಿ ಸ್ವಚ್ಛತಾ ಕಾರ್ಯಕ್ರಮವು ರವಿವಾರ ನಡೆಯಿತು.

ಅಸಯ್ಯದ್ ಮುಸ್ತಾಕುಲ್ ರಹಮಾನ್ ಚಟ್ಟೆಕ್ಕಲ್ ತಂಗಳ್,ರವರು ದುಆಶೀರ್ವಚನ ಮಾಡುವ ಮೂಲಕ ಕಾರ್ಯಕ್ರಮಕ್ಕೆ  ಚಾಲನೆ ನೀಡಿ, ಊರಿನ  ಯುವಕರು ಧಾರ್ಮಿಕ ಚೌಕಟ್ಟಿನೊಳಗೆ ಎಲ್ಲಾ ಜಾತಿ ಮತ ಭಾಂಧವರ ವಿಶ್ವಾಸ ಗಳಿಸುವ ಮೂಲಕ ಸಾಮಾಜಿಕ ಕಾರ್ಯಗಳನ್ನು ನಡೆಸುವ ಅಗತ್ಯವಿದೆ ಎಂದರು.

ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಕ್ ಕುಕ್ಕಾಜೆ ಭಾಗವಹಿಸಿ ಶುಭ ಹಾರೈಸಿದರು. ಸ್ವಚ್ಛತಾ ಕಾರ್ಯಕ್ರಮದ ಬಳಿಕ ಉಂಬಳಿಗದ್ದೆ ಎಂಬಲ್ಲಿ ಶಿಥಿಲಾವಸ್ಥೆಯಲ್ಲಿರುವ ಪರಿಶಿಷ್ಟ ಜಾತಿಯ ಒಂಟಿಜೀವಿ ಚೋಮ ನಲಿಕೆ ಎಂಬವರ ವಾಸದ ಮನೆಯನ್ನು ಶ್ರಮದಾನದ ಮೂಲಕ ದುರಸ್ಥಿಗೊಳಿಸಲಾಯಿತು.

ಎಸ್ ಎಸ್ ಎಫ್ ಕಾಪಿಕಾಡು ಸಂಘಟನೆಯ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಕಾಪಿಕಾಡು, ಪಧಾಧಿಕಾರಿಗಳಾದ ಅಬ್ದುಲ್ ಅಝೀಝ್, ಸಿದ್ದೀಕ್ ಫಾಲಿಲಿ ತೋಟ, ಹಂಝ ದರ್ಬೆ, ಸಿದ್ದೀಕ್ ಮುಸ್ಲಿಯಾರ್ ಬೈಲ್, ಅಬ್ದುಲ್ ರಝಕ್ ಕಲ್ಪನೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News