ಪಡುಬಿದ್ರಿ: ತೈಲ ಬೆಲೆ ಏರಿಕೆ ವಿರುದ್ಧ ಎಸ್‍ಎಸ್‍ಎಫ್ ಪ್ರತಿಭಟನೆ
Update: 2021-07-11 23:06 IST
ಪಡುಬಿದ್ರಿ: ತೈಲ ಬೆಲೆ ಏರಿಸಿರುವ ಕ್ರಮವನ್ನು ವಿರೋಧಿಸಿ ಎಸ್‍ಎಸ್‍ಎಫ್ ಪಡುಬಿದ್ರಿ ಸೆಕ್ಟರ್ ವತಿಯಿಂದ ರವಿವಾರ ಪಡುಬಿದ್ರಿಯ ಭವ್ಯ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಭಿತ್ತಿ ಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಕೊರೊನಾ ಸಮಯದಲ್ಲಿ ತೈಲ ಬೆಲೆ ಏರಿಸಿರುವುದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಜನರು ಸಂಕಷ್ಟದಲ್ಲಿ ರುವ ಸಮಯದಲ್ಲಿ ಸರ್ಕಾರವು ಬೆಲೆ ಏರಿಸಿರುವುದು ಸರಿಯಲ್ಲ. ಕೂಡಲೇ ತೈಲ ಹಾಗೂ ದಿನಬಳಕೆ ವಸ್ತುಗಳ ಬೆಲೆ ಇಳಿಸುವ ಮೂಲಕ ಜನರ ಕಷ್ಟದಲ್ಲಿ ಭಾಗಿಯಾಗಬೇಕಾಗಿದೆ ಎಂದರು.
ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ನಿಯಾಝ್, ಶಾಫಿ ಎಂ.ಎಸ್, ಸೆಕ್ಟರ್ ಅಧ್ಯಕ್ಷ ಮೆಹಫೂಝ್, ಪಡುಬಿದ್ರಿ ಶಾಖೆಯ ಅಧ್ಯಕ್ಷ ಸಫ್ವಾನ್, ಕನ್ನಂಗಾರ್ ಯುನಿಟ್ ಅಧ್ಯಕ್ಷ ನಿಹಾದ್, ಡಿವಿಶನ್ ನಾಯಕ ಸಿರಾಜ್ ಎಂ.ಎಸ್, ತೌಶೀರ್ ಪಿ.ಎಂ, ತಶ್ರೀಫ್, ಸೆಕ್ಟರ್ ನಾಯಕರಾದ ಶಫೀಕ್, ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.