×
Ad

ಭಟ್ಕಳ: ಕಾಲು ಜಾರಿ ಹೊಳೆಗೆ ಬಿದ್ದು ರೈತ ನೀರುಪಾಲು

Update: 2021-07-12 17:15 IST

ಭಟ್ಕಳ: ತಾಲೂಕಿನ ಮುಂಡಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ರೈತರೋರ್ವರು ಹೊಳೆಯಲ್ಲಿ ಕೈ ತೊಳೆಯಲು ಹೋಗಿದ್ದು ಅಕಸ್ಮಿಕವಾಗಿ ಕಾಲು ಜಾರಿಬಿದ್ದು ನೀರುಪಾಲಾದ ಘಟನೆ ಸೋಮವಾರ ಮುಂಡಳ್ಳಿಯಲ್ಲಿ ನಡೆದಿದೆ. ನೀರುಪಾಲಾಗಿರುವ ವ್ಯಕ್ತಿಯನ್ನು ಮುಂಡಳ್ಳಿಯ ನಿವಾಸಿ ಶ್ರೀಧರ ದೇವಾಡಿ(40) ಎಂದು ಗುರುತಿಸಲಾಗಿದೆ.

ಶ್ರೀಧರ ಅವರು ಇಂದು ಬೆಳಿಗ್ಗೆ  ಗದ್ದೆ ಕೆಲಸಕ್ಕೆಂದು ಹೋದವರು ಕೆಲಸವನ್ನು ಮುಗಿಸಿ ಕೈ ತೊಳೆಯಲು ಹೊಳೆಗೆ ಹೋಗಿದ್ದಾರೆ. ಆ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ಹೊಳೆಯಲ್ಲಿ ಬಿದ್ದು ಕೊಚ್ಚಿಹೋಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ  ಮಾಡಿ ಮಾಹಿತಿ ನೀಡಿದ್ದಾರೆ. 

ಸ್ಥಳಿಯರು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಎರಡು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದರೂ ಯಾವುದೇ ಪೊರಯೋಜನವಾಗಿಲ್ಲ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News