×
Ad

ಮಾನವರು ಸಹೋದರರು ಸೌಹಾರ್ದ ವೇದಿಕೆ ವತಿಯಿಂದ ಕವಿಗೋಷ್ಠಿ

Update: 2021-07-12 17:26 IST

ವಿಟ್ಲ: ಸಾಹಿತ್ಯ ಎನ್ನುವುದು ಪ್ರಭಾವೀ ಮತ್ತು ಶ್ರೀಮಂತ ಕ್ಷೇತ್ರವಾಗಿದ್ದು ಸಮಾರಸ್ಯದ ಬದುಕಿಗೆ ಪ್ರೇರಣೆ ನೀಡಿ ಸಮಾಜದಲ್ಲಿ ಬದಲಾವಣೆಗಳನ್ನು ತರುವ ಸಾಮರ್ಥ್ಯ ಸಾಹಿತ್ಯ ಲೋಕಕ್ಕಿದೆ  ಎಂದು ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಅಧ್ಯಕ್ಷ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ ಹೇಳಿದ್ದಾರೆ.

ಮಾನವರು ಸಹೋದರರು ಸೌಹಾರ್ದ ವೇದಿಕೆ ವತಿಯಿಂದ ಆಯೋಜಿಸಲಾದ ಆನ್‌ಲೈನ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕವಿಗಳಾದ ಹೈದರ್ ಅಲಿ ಐವತ್ತೊಕ್ಲು,ಹಮೀದ್ ಹಸನ್ ಮಾಡೂರು,ಅನ್ಸಾರ್ ಕಾಟಿಪಳ್ಳ,ಎಂ.ಎ.ಮುಸ್ತಫಾ ಬೆಳ್ಳಾರೆ,ಸಮ್ಯಕ್ತ್ ಜೈನ್ ಕಡಬ,ಡಿ.ಐ.ಅಬೂಬಕರ್ ಕೈರಂಗಳ,ಎನ್.ಎಂ.ಹನೀಫ್ ನಂದರಬೆಟ್ಟು ಮೊದಲಾದವರು ಕವನ ವಾಚನ ನಡೆಸಿದರು.

ಕೋಶಾಧಿಕಾರಿ,ಎ.ಅಬೂಬಕರ್ ಅನಿಲಕಟ್ಟೆ,ವಿಟ್ಲ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಇಖ್ಬಾಲ್ ಬಾಳಿಲ ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News