ಕಾಂಗ್ರೆಸ್‌ ಲೋಕಸಭಾ ನಾಯಕ ಸ್ಥಾನದಿಂದ ಅಧೀರ್‌ ರಂಜನ್‌ ಚೌಧರಿ ಬದಲಾವಣೆ?

Update: 2021-07-12 13:26 GMT

ಹೊಸದಿಲ್ಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ  ಆಧೀರ್ ರಂಜನ್ ಚೌಧರಿ ಅವರನ್ನು ಬದಲಾಯಿಸಲಾಗುವುದು ಹಾಗೂ  ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಸ್ಫೋಟಕ ಪತ್ರ ಬರೆದ ಕೆಲವು ನಾಯಕರು ಈ ಹುದ್ದೆಗೆ ಸ್ಪರ್ಧಿಗಳಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸತ್ತಿನ ಚಳಿಗಾಲದ  ಅಧಿವೇಶನ ಜುಲೈ 19 ರಿಂದ ಆರಂಭವಾಗುತ್ತದೆ.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಪಕ್ಷದ ನಾಯಕರಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗುವ ಸ್ಪರ್ಧೆಯಲ್ಲಿ  ಶಶಿ ತರೂರ್ ಹಾಗೂ  ಮನೀಶ್ ತಿವಾರಿ ಇದ್ದಾರೆ. ಗೌರವ್ ಗೊಗೊಯ್, ರವ್ನೀತ್ ಸಿಂಗ್ ಬಿಟ್ಟು ಹಾಗೂ  ಉತ್ತಮ್ ಕುಮಾರ್ ರೆಡ್ಡಿ ಅವರ ಹೆಸರನ್ನು ಸಹ ಪರಿಗಣಿಸಲಾಗುತ್ತಿದೆ.

ಚೌಧರಿ ಅವರನ್ನು ಲೋಕಸಭೆಯಲ್ಲಿ ಕಾಂಗ್ರಸ್ ನಾಯಕ ಸ್ಥಾನದಿಂದ ತೆಗೆದುಹಾಕುವ ಬಗ್ಗೆ ದೀರ್ಘ ಸಮಯದಿಂದ ಊಹಾಪೋಹಗಳು ಕೇಳಿಬರುತ್ತಿದೆ. ಒಬ್ಬರಿಗೆ ಒಂದೇ ಹುದ್ದೆ ನಿಯಮವನ್ನು ಈಗ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚೌಧರಿ ಬಂಗಾಳ ಕಾಂಗ್ರೆಸ್ ಅಧ್ಯಕ್ಷರು ಹಾಗೂ  ಲೋಕಸಭೆಯಲ್ಲಿ ಪಕ್ಷದ ನಾಯಕರಾಗಿದ್ದಾರೆ. ಎರಡು ಹುದ್ದೆಗಳನ್ನು ಹೊಂದಿರುವ ಇತರರು ಸಹ ಒಂದು ಹುದ್ದೆಯಿಂದ ಮುಕ್ತರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News