×
Ad

ಸ್ಕೋಡಾ ಕುಶಾಕ್ ಕಾರು ಮಂಗಳೂರು ಮಾರುಕಟ್ಟೆಗೆ ಬಿಡುಗಡೆ

Update: 2021-07-12 18:45 IST

ಮಂಗಳೂರು, ಜು.12: ಸ್ಕೋಡಾ ಅಟೊ ಇಂಡಿಯದ ಪ್ರಾಜೆಕ್ಟ್-2ರ ಅಡಿಯಲ್ಲಿ ಉತ್ಪಾದಿಸಲ್ಪಟ್ಟ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ‘ಸ್ಕೋಡಾ ಕುಶಾಕ್’ ಕಾರನ್ನು ನಗರದ ಚಿಲಿಂಬಿ-ಉರ್ವದ ಡಿಯೋ ಗ್ರೆಸಿಯಸ್ ಕಟ್ಟಡದ ಸ್ಕೋಡಾ ಅಟೋ ಇಂಡಿಯ-ಟಫೆ ಆಕ್ಸೆಸ್ ಶೋರೂಂನಲ್ಲಿ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಮಂಗಳೂರು ಮಾರುಕಟ್ಟೆಗೆ ಸೋಮವಾರ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಕೋಡಾ ಸಂಸ್ಥೆಯ ವಿನೂತನ ಕುಶಾಕ್ ಕಾರು ಮಂಗಳೂರು ಮಾರುಕಟ್ಟೆಗೆ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಕಾರನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಉತ್ಪಾದನೆಯಾಗಿದೆ. ಇದರಿಂದ ದೇಶದ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. ಉತ್ಕೃಷ್ಟ ಗುಣಮಟ್ಟದ ಸ್ಕೊಡಾ ಕಾರುಗಳನ್ನು ಕರಾವಳಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸ್ಕೋಡಾ ಮಂಗಳೂರು ಬ್ರಾಂಚ್ ಇನ್‌ಚಾರ್ಜ್ ಹಾಗೂ ಟಫೆ ಆಕ್ಸೆಸ್ ಲಿಮಿಟೆಡ್‌ನ ಸೇಲ್ಸ್ ಮ್ಯಾನೇಜರ್ ಅಬೂಬಕರ್ ಸಿದ್ದೀಕ್ ಮಾತನಾಡಿ, ಸ್ಕೋಡಾ ಅಟೊ ಇಂಡಿಯ ಸಂಸ್ಥೆಯು ಭಾರತದಲ್ಲಿ ಕಳೆದ 20 ವರ್ಷಗಳಿಂದ ಉತ್ತಮ ಗುಣಮಟ್ಟದ ಕಾರುಗಳನ್ನು ಉತ್ಪಾದಿಸುತ್ತಿದೆ. ಅತ್ಯುತ್ತಮ ಜರ್ಮನ್ ಕಾರುಗಳ ಕೆಟಗರಿಯಲ್ಲಿ ಸ್ಕೋಡಾ ಕ್ರಾಂತಿ ಮಾಡಿದೆ ಎಂದರು.

ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕುಶಾಕ್ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಕೈಗೆಟುಕುವ ದರದಲ್ಲಿ ಖರೀದಿಗೆ ಲಭ್ಯವಿದೆ. ದೇಶದಲ್ಲಿ ‘ಸ್ಕೋಡಾ ಕುಶಾಕ್’ ಬಹುಬೇಡಿಕೆಯ ಕಾರು ಎಂದು ಗುರುತಿಸಿಕೊಂಡಿದೆ. ಕಾರುಗಳ ಗುಣಮಟ್ಟದಲ್ಲಿ ಸಂಸ್ಥೆಯು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಸಂಸ್ಥೆಯು ಮುಖ್ಯವಾಗಿ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಮಂಗಳೂರಿನ ಎಕ್ಸ್-ಶೋರೂಂನಲ್ಲಿ ಕಾರಿನ ಬೆಲೆಯು 13 ಲಕ್ಷ ರೂ.ನಿಂದ ಆರಂಭಗೊಂಡು 17 ಲಕ್ಷ ರೂ.ವರೆಗೆ ಇದೆ ಎಂದು ಅವರು ಮಾಹಿತಿ ನೀಡಿದರು.

ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ‘ಸ್ಕೋಡಾ ಕುಶಾಕ್’ ಕಾರಿನ ಕೀಯನ್ನು ಭಂಡಾರಿ ಸ್ಕೂಲ್ ಬುಕ್ ಪ್ರೈ.ಲಿ.ನ ತೇಜಸ್ ಭಂಡಾರಿ-ಐಶ್ವರ್ಯ ಭಂಡಾರಿ ದಂಪತಿಗೆ ಹಸ್ತಾಂತರಿಸಿದ್ದಾರೆ.

ಸಮಾರಂಭದಲ್ಲಿ ಸ್ಕೋಡಾದ ಸರ್ವಿಸ್ ಮ್ಯಾನೇಜರ್ ವಿನೋದ್ ಡಿಸೋಜ, ಸರ್ವಿಸ್ ಇನ್‌ಚಾರ್ಜ್ ವಿದ್ಯಾಧರ್ ಸೆತೂರು ಮತ್ತಿತರರು ಉಪಸ್ಥಿತರಿದ್ದರು.

ವಿಶೇಷತೆ: ‘ಸ್ಕೋಡಾ ಕುಶಾಕ್’ ಕಾರು ಜಾಗತಿಕ ಮೆಚ್ಚುಗೆ ಪಡೆದ ಟಿಎಸ್‌ಐ ತಂತ್ರಜ್ಞಾನ ಹೊಂದಿದೆ. 1 ಲೀ. ಹಾಗೂ 1.5 ಲೀ.ನ ಎರಡು ಇಂಜಿನ್‌ಗಳನ್ನು ಈ ಕಾರು ಒಳಗೊಂಡಿದೆ. ವೈರ್‌ಲೆಸ್ ಆ್ಯಂಡ್ರಾಯ್ಡ್ ಅಟೋ, ಆ್ಯಪಲ್ ಕಾರ್‌ಪ್ಲೇ ಜೊತೆಗೆ 10 ಇಂಚಿನ ಟಚ್‌ಸ್ಕ್ರೀನ್‌ನ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಇದೆ. ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಎಲ್‌ಇಡಿ ಲೈಟಿಂಗ್, ಕ್ರೂಸ್ ಕಂಟ್ರೋಲ್, ಸನ್‌ರೂಫ್ ಸೌಲಭ್ಯವಿದೆ. ಆರು ಏರ್‌ಬ್ಯಾಗ್ಸ್‌ನೊಂದಿಗೆ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ರಿಯರ್ ಪಾರ್ಕಿಂಗ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರ್ ಸಹಿತ ಹಲವು ವಿಶೇಷತೆಗಳನ್ನು ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News