ಉ.ಪ್ರ ಸರಕಾರದ 'ಒಂದೇ ಮಗುʼ ಯೋಜನೆ ವಿರೋಧಿಸಿ, ಚೀನಾದ ಉದಾಹರಣೆ ನೀಡಿದ ವಿಶ್ವ ಹಿಂದೂ ಪರಿಷತ್‌

Update: 2021-07-12 13:30 GMT

ಲಕ್ನೋ: ಜನಸಂಖ್ಯಾ ನಿಯಂತ್ರಣ ಕರಡು ಮಸೂದೆಯಲ್ಲಿ ಉತ್ತರಪ್ರದೇಶ ಸರಕಾರವು ಒಂದೇ ಮಗುವನ್ನು ಹೊಂದುವವರಿಗೆ ಕೆಲ ವಿನಾಯಿತಿಗಳನ್ನು ಘೋಷಿಸಿತ್ತು. ಆದರೆ ಈ ಯೋಜನೆಯು ಜನಸಂಖ್ಯೆಯನ್ನು ಸ್ಥಿರಗೊಳಿಸುವ ಹಾಗೂ ಇಬ್ಬರು ಮಕ್ಕಳನ್ನು ಹೊಂದುವ ಉದ್ದೇಶಿತ ರೀತಿಗಳನ್ನು ಮೀರಿದೆ ಎಂದು ವಿಶ್ವ ಹಿಂದೂ ಪರಿಷತ್‌ ಹೇಳಿದೆ. ತನ್ನ ಅಧಿಕೃತ ಖಾತೆಯಲ್ಲಿ ಈ ಬಗ್ಗೆ ವಿಹಿಂಪ ಟ್ವೀಟ್‌ ಮಾಡಿದೆ.

"ಈ ಮಸೂದೆಯ ಮುನ್ನುಡಿಯಲ್ಲಿ ಇದು ಜನಸಂಖ್ಯೆಯನ್ನು ಸ್ಥಿರಗೊಳಿಸಲು ಮತ್ತು ಎರಡು ಮಕ್ಕಳನ್ನು ಹೊಂದುವುದನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಲಾಗಿದೆ. ಈ ಎರಡೂ ಉದ್ದೇಶಗಳನ್ನು ವಿಶ್ವ ಹಿಂದೂ ಪರಿಷತ್‌ ಒಪ್ಪುತ್ತದೆ. ಆದರೆ ಅದೇ ಮಸೂದೆಯ 5,6 ಮತ್ತು ಏಳನೇ ಸೆಕ್ಷನ್‌ ಸರಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕ ಸೇವಕರು ಒಂದೇ ಮಗುವನ್ನು ಹೊಂದಬೇಕೆಂದು ಹೇಳುತ್ತದೆ. ಇದು ಮೇಲಿನ ಉದ್ದೇಶಗಳನ್ನು ಮೀರಿ ಹೋಗುತ್ತದೆ" ಎಂದು ಟ್ವೀಟ್‌ ನಲ್ಲಿ ತಿಳಿಸಲಾಗಿದೆ.

ಇದೇ ರೀತಿಯ ಕಾನೂನುಗಳನ್ನು ರೂಪಿಸಿದ್ದ ಚೀನಾದಲ್ಲಿ, ಒಂದು ಮಗುವಿನ ನೀತಿಯನ್ನು ಅರ್ಧಕ್ಕಿಂತ ಹೆಚ್ಚು ನಿರೀಕ್ಷಿತ ಪೋಷಕರಿಗೆ ಎಂದಿಗೂ ಅನ್ವಯಿಸಲಾಗಿಲ್ಲ. ಸುಮಾರು ಮೂರು ದಶಕಗಳಲ್ಲಿ, ಅದನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕಾಯಿತು” ಎಂದು ತನ್ನ ಟ್ವೀಟ್‌ ನಲ್ಲಿ ವಿಹಿಂಪ ಉಲ್ಲೇಖಿಸಿದೆ.

ಒಂದು-ಮಗುವನ್ನು ಮಾತ್ರ ಹೊಂದುವ ನಿಯಮವು ವಿಭಿನ್ನ ಸಮುದಾಯಗಳ ನಡುವಿನ ಅಸಮತೋಲನವನ್ನು ಹೆಚ್ಚಿಸಲು ಕಾರಣವಾಗಬಹುದು ಎಂದು ಎಚ್ಚರಿಸಿದ ವಿಹಿಂಪ, “ಏಕೆಂದರೆ ಅವರು ಕುಟುಂಬ ಯೋಜನೆ ಮತ್ತು ಗರ್ಭನಿರೋಧಕಕ್ಕೆ ಸಂಬಂಧಿಸಿದ ಪ್ರೋತ್ಸಾಹ ಮತ್ತು ಪ್ರೋತ್ಸಾಹಕಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ” ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News