ಕಾನೂನಿನಿಂದ ಜನಸಂಖ್ಯೆ ನಿಯಂತ್ರಿಸಲು ಸಾಧ್ಯವಿಲ್ಲ: ನಿತೀಶ್ ಕುಮಾರ್

Update: 2021-07-12 14:31 GMT

ಪಾಟ್ನಾ: ಬಿಜೆಪಿ ಆಳ್ವಿಕೆಯಲ್ಲಿರುವ ಉತ್ತರ ಪ್ರದೇಶ ಹಾಗೂ  ಅಸ್ಸಾಂ ರಾಜ್ಯಗಳು ಜನಸಂಖ್ಯೆಯನ್ನು ನಿಯಂತ್ರಿಸಲು ಕಾನೂನುಗಳನ್ನು ತರಲು ಮುಂದಾಗುತ್ತಿದ್ದಂತೆ ಬಿಹಾರ ಮುಖ್ಯಮಂತ್ರಿ  ನಿತೀಶ್ ಕುಮಾರ್ ಈ ಹೆಜ್ಜೆ ಕುರಿತಾಗಿ ತಮ್ಮ ಬಲವಾದ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

"ರಾಜ್ಯಗಳು ತಮಗೆ ಬೇಕಾದುದನ್ನು ಮಾಡಬಹುದು. ಆದರೆ ಕಾನೂನಿನೊಂದಿಗೆ ಜನಸಂಖ್ಯಾ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಸ್ಪಷ್ಟವಾಗಿ ನಂಬುತ್ತೇನೆ. ಚೀನಾ ಅಥವಾ ಇನ್ನಾವುದೇ ಉದಾಹರಣೆಯನ್ನು ನೋಡಿ" ಎಂದು ನಿತೀಶ್ ಕುಮಾರ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

"2040 ರ ವೇಳೆಗೆ ಜನಸಂಖ್ಯೆಯು ಕುಸಿಯಲು ಆರಂಭವಾಗುತ್ತದೆ. ನಾವು ಈ ಮಾರ್ಗದಲ್ಲಿ ಹೋಗುತ್ತಿದ್ದೇವೆ. ಇದನ್ನು ಕಾನೂನಿನಿಂದ ಮಾಡಬಹುದೆಂದು ಕೆಲವರು ನಂಬಿದರೆ ಅದು ಅವರ ಆಲೋಚನೆ. ನಾವು ಇದನ್ನು ಹೇಗೆ ಮಾಡಬಹುದು ಎಂಬುದರ ಕುರಿತು ನಮ್ಮ ಆಲೋಚನೆ ಸ್ಪಷ್ಟವಾಗಿದೆ. ಇದು ಕೇವಲ ಒಂದು ಸಮುದಾಯದ ಬಗ್ಗೆ ಮಾತ್ರವಲ್ಲ , ಆದರೆ ಮಹಿಳೆಯರಿಗೆ ಶಿಕ್ಷಣ ನೀಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ' ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News