×
Ad

ವಿಎಚ್‌ ಪಿಯ ಮಹಾ ಪಂಚಾಯತ್ ನಲ್ಲಿ ದ್ವೇಷ ಭಾಷಣ: 'ಜಾಮಿಯಾ ಶೂಟರ್' ವಿರುದ್ಧ ಪ್ರಕರಣ ದಾಖಲಿಸಿದ ಗುರುಗ್ರಾಮದ ಪೊಲೀಸರು

Update: 2021-07-12 20:04 IST
photo: twitter

ಹೊಸದಿಲ್ಲಿ: ಪಟೌಡಿಯಲ್ಲಿ ವಿಎಚ್ಪಿಯ ಮಹಾ ಪಂಚಾಯತ್ ನಲ್ಲಿ ದ್ವೇಷ ಭಾಷಣ ಮಾಡಿದ್ದಕ್ಕಾಗಿ ಗುರುಗ್ರಾಮ್ ಪೊಲೀಸರು ಸೋಮವಾರ ‘ರಾಮ್ ಭಕ್ತ ಗೋಪಾಲ್’ಎಂದು ಕರೆಯಲ್ಪಡುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಕಳೆದ ವರ್ಷ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯದ ಹೊರಗೆ ಸಿಎಎ ಹಾಗೂ  ಎನ್ಆರ್ಸಿ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ ಆರೋಪ ಈತನ ಮೇಲಿದೆ.
ಕಳೆದ ವಾರದ ಆರಂಭದಲ್ಲಿ, ಲವ್-ಜಿಹಾದ್ ವಿರುದ್ಧ ಆಯೋಜಿಸಿದ್ದ ವಿಎಚ್ಪಿಯ ಮಹಾ ಪಂಚಾಯತ್ ನಲ್ಲಿ ಈತ ಮಾಡಿರುವ  ಭಾಷಣದ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದವು. 

ಈತ  ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹಾಗೂ ಹಿಂಸಾತ್ಮಕ ಟೀಕೆಗಳಿಂದ ಪ್ರಚೋದಿಸಿದ್ದ. ಘಟನೆ ನಡೆದ ಒಂದು ವಾರಕ್ಕಿಂತಲೂ ಹೆಚ್ಚು ಸಮಯದ ನಂತರ ಗುರುಗ್ರಾಮ್ ಪೊಲೀಸರು ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ದಿನೇಶ್ ಎಂಬ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News