ವೆಬಿನಾರ್‌ಗೆ ಹೆಸರು ನೊಂದಾಯಿಸಲು ಸೂಚನೆ
Update: 2021-07-12 20:05 IST
ಉಡುಪಿ, ಜು.12: ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯು ಎಸೆಸೆಲ್ಸಿ, ಪಿಯುಸಿ, ಐಟಿಐ, ಬಿ.ಎಸ್ಸಿ ನಂತರ ಉದ್ಯೋಗಾಧಾರಿತ ಪೆಟ್ರೋಕೆಮಿಕಲ್ಸ್, ಪಾಲಿಮರ್, ಪ್ಲಾಸ್ಟಿಕ್ಸ್ ಡಿಪ್ಲೋಮಾ ಕೋರ್ಸ್‌ಗಳನ್ನು ಮಾಡಿದರೆ ಉದ್ಯೋಗ ಅವಕಾಶಗಳು ಯಾವ ಕ್ಷೇತ್ರಗಳಲ್ಲಿ ಲಭ್ಯವಿದೆ ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಡುವ ಸಲುವಾಗಿ ಜು.16ರಂದು ಬೆಳಗ್ಗೆ 11 ಗಂಟೆಗೆ ಉಚಿತ ವೆಬಿನಾರ್ ಒಂದನ್ನು ಆಯೋಜಿಸಿದೆ.
ವೆಬಿನಾರ್‌ನಲ್ಲಿ ಭಾಗವಹಿಸಲು ವೆಬ್‌ಸೈಟ್-https://forms.gle/Q4H4rPoVKWdwASSn7- ನಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಮೈಸೂರು ಸಿಪೆಟ್ ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.