×
Ad

ಮಂಗಳೂರು: ಬಂದರು ಶ್ರಮಿಕರ ಸಂಘದಿಂದ ಪ್ರತಿಭಟನೆ

Update: 2021-07-13 15:24 IST

ಮಂಗಳೂರು, ಜು.13: ಪೆಟ್ರೋಲ್, ಡೀಸೆಲ್, ವಿದ್ಯುತ್, ಗ್ಯಾಸ್ ಮತ್ತಿತರ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಬಂದರು ಶ್ರಮಿಕರ ಸಂಘದ ವತಿಯಿಂದ ಹಳೆ ಬಂದರು ಸಗಟು ಮಾರುಕಟ್ಟೆಯ ಗೋಳಿಕಟ್ಟೆ ವೃತ್ತದ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ದುರ್ಬಲ ಆರ್ಥಿಕ ನೀತಿಯಿಂದಾಗಿ ದೇಶದ ಅರ್ಥ ವ್ಯವಸ್ಥೆ ಅಧಪತನದತ್ತ ಸಾಗುತ್ತಿದೆ. ಅಕ್ರಮಗಳೇ ಬಿಜೆಪಿ ಸರಕಾರದ ನೀತಿಗಳಾಗುತ್ತಿವೆ. ಹಾಗಾಗಿ ಭ್ರಷ್ಟಾಚಾರ ಪ್ರಕರಣ ಹೊರಬರುತ್ತಿಲ್ಲ ಎಂದು ಆಪಾದಿಸಿದರು.

ಬಂದರು ಶ್ರಮಿಕರ ಅಧ್ಯಕ್ಷ ಪಿ.ಎಸ್ ವಿಲ್ಲಿ ವಿಲ್ಸನ್, ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಝ್ ಮಾತನಾಡಿದರು.

ಸಂಘದ ಪ್ರಮುಖರಾದ ಹಂಝ ಜಪ್ಪಿನಮೊಗರು, ಸಿದ್ದೀಕ್ ಬೆಂಗರೆ, ಫಾರೂಕ್ ಉಳ್ಳಾಲ, ಮಾಧವ ಕಾವೂರು, ಮಜೀದ್ ಉಳ್ಳಾಲ, ಎಸ್‌ವೈಎಸ್ ರಾಜ್ಯ ಮುಖಂಡ ಅಶ್ರಫ್ ಕಿನಾರ ಪಾಲ್ಗೊಂಡಿದ್ದರು.

ಸಂಘದ ಕೋಶಾಧಿಕಾರಿ ಹರೀಶ್ ಕೆರೆಬೈಲು ಸ್ವಾಗತಿಸಿದರು. ಮೊಯಿದಿನ್ ಕಲ್ಕಟ್ಟ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News