×
Ad

ಬಂಟ್ವಾಳ: ಎರಡನೇ ಆಕ್ಸಿಜನ್ ಘಟಕ ಉದ್ಘಾಟನೆ

Update: 2021-07-13 18:51 IST

ಬಂಟ್ವಾಳ, ಜು.13: ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸ್ವಾಮ್ಯದ ಕಂಪೆನಿಗಳ ಸಾರ್ವಜನಿಕ ಹೊಣೆಗಾರಿಕಾ ನಿಧಿಯಿಂದ 1.40 ಕೋಟಿ ರೂಪಾಯಿ ವೆಚ್ಚದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ಅನುಷ್ಠಾನಗೊಳಿಸಿದ ನಿಮಿಷಕ್ಕೆ 500 ಲೀ. ಉತ್ಪಾದನಾ ಸಾಮರ್ಥ್ಯದ ನೂತನ ಆಕ್ಸಿಜನ್ ಘಟಕ ಮಂಗಳವಾರ ಉದ್ಘಾಟನೆಗೊಂಡಿತು. 

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಉಪಸ್ಥಿತಿಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಅವರು ಘಟಕವನ್ನು ಉದ್ಘಾಟಿಸಿದರು. 

ಬಳಿಕ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸುಮಾರು 1.40 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಂಡ ಆಕ್ಸಿಜನ್ ಘಟಕದಿಂದ ಬಂಟ್ವಾಳದ ಆಕ್ಸಿಜನ್ ಬೇಡಿಕೆಗಳ ಪೂರೈಕೆಯ ಜತೆಗೆ ಇತರ ಭಾಗಗಳಿಗೂ ಆಕ್ಸಿಜನ್ ಪೂರೈಕೆಗೆ ನೆರವಾಗಲಿದೆ. ಇದರ ಅನುಷ್ಠಾನದ ಹಿಂದೆ ಮಾರ್ಗದರ್ಶನ ನೀಡಿದ ಸಂಸದರು, ಶ್ರಮಿಸಿದ ಶಾಸಕರು, ಅನುದಾನ ನೀಡಿದ ಕಂಪೆನಿಗಳು ಹಾಗೂ ಎಲ್ಲಾ ಅಧಿಕಾರಿ ವರ್ಗಕ್ಕೆ ಸರಕಾರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್., ಬಂಟ್ವಾಳ ತಾಪಂ ಇಒ ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ, ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯರಾದ ಹರಿಪ್ರಸಾದ್, ರೇಖಾ ಪೈ, ಜಿಪಂ ನಿಕಟಪೂರ್ವ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಮೀನಾಕ್ಷಿ ಗೌಡ, ಶಶಿಕಲಾ ಬಿ., ದೇವಕಿ, ಚೈತನ್ಯ, ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ರಮದಾಸ್ ಬಂಟ್ವಾಳ, ಸುದರ್ಶನ್ ಬಜ, ಪ್ರಕಾಶ್ ಅಂಚನ್, ರಮನಾಥ ರಾಯಿ, ಗಣೇಶ್ ರೈ ಮಾಣಿ, ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಪುರುಷೋತ್ತಮ ಶೆಟ್ಟಿ, ಯಶವಂತ ನಗ್ರಿ, ಕೇಶವ ದೈಪಲ, ಪುಷ್ಪರಾಜ್ ಚೌಟ, ಚಿದಾನಂದ ರೈ ಕಕ್ಯ, ಯಶೋಧರ ಕರ್ಬೆಟ್ಟು, ಆನಂದ ಶಂಭೂರು, ರೊನಾಲ್ಡ್ ಡಿಸೋಜ, ಹರ್ಷಿಣಿ ಪುಷ್ಪಾನಂದ, ಮಹೇಶ್ ಶೆಟ್ಟಿ, ಉಮೇಶ್ ಅರಳ, ಮೋನಪ್ಪ ದೇವಸ್ಯ, ಸದಾಶಿವ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News