ಕೋಟ: ಸ್ಕೂಟರ್‌ನಲ್ಲಿ ಅಕ್ರಮ ಗಾಂಜಾ ಸಾಗಾಟ; ಓರ್ವನ ಸೆರೆ

Update: 2021-07-13 14:48 GMT

ಕೋಟ, ಜು.13: ಸ್ಕೂಟರ್‌ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವನನ್ನು ಕೋಟ ಪೊಲೀಸರು ಗಿಳಿಯಾರು ಗ್ರಾಮದ ಕದ್ರಿಕಟ್ಟು ಎಂಬಲ್ಲಿ ಜು.12ರಂದು ಬಂಧಿಸಿದ್ದಾರೆ.

ಇಬ್ರಾಹಿಂ ಆಕಾಶಭವನ ಬಂಧಿತ ಆರೋಪಿ. ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ನೋಡಿ ಸ್ಕೂಟಿಯನ್ನು ಹಿಂದಕ್ಕೆ ತಿರುಗಿಸಿ ಪರಾರಿಯಾಗಲು ಪ್ರಯತ್ನಿಸಿದ್ದ ಇಬ್ರಾಹಿಂನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂತೆನ್ನಲಾಗಿದೆ.

ಬಂಧಿತನಿಂದ ಸ್ಕೂಟರ್ ಸೀಟಿನ ಅಡಿಯಲ್ಲಿರುವ ಬಾಕ್ಸ್‌ನಲ್ಲಿದ್ದ 35ಸಾವಿರ ರೂ. ಮೌಲ್ಯದ 1ಕೆ.ಜಿ 420 ಗ್ರಾಂ ತೂಕದ ಗಾಂಜಾ, ಸ್ಕೂಟರ್, ನಗದು ಹಾಗೂ ಮೊಬೈಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News