×
Ad

ಕಾರ್ಕಳ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

Update: 2021-07-14 16:14 IST

ಕಾರ್ಕಳ, ಜು.14: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಕಾರ್ಕಳ ರೋಟರಿ ಬಾಲವನದಲ್ಲಿ ಇಂದು ಜರುಗಿತು‌.

 ಸಂಪನ್ಮೂಲ ವ್ಯಕ್ತಿಯಾಗಿ  ಭಾಗವಹಿಸಿದ ಕಾಪು ಪತ್ರಕರ್ತ ಸಂಘದ ಸದಸ್ಯ, ಸಾಹಿತಿ ಪುಂಡಲೀಕ ಮರಾಠೆ ಮಾತನಾಡಿ, ಪತ್ರಿಕೆಗಳೆಂದರೆ ಮಿನಿ ವಿಶ್ವಕೋಶವಿದ್ದಂತೆ. ಪತ್ರಿಕೆಗಳೂ ಪಾರದರ್ಶಕವಾಗಿದ್ದು ವಸ್ತುನಿಷ್ಠ, ನಿಖರ ಮಾಹಿತಿ ನೀಡುವ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತದೆ ಎಂದರು.

 ಮುಖ್ಯ ಅತಿಥಿ ‌ಕಾರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ಮಾತನಾಡಿ, ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದು ಹಾಗೂ  ಮಾನವೀಯ ಮೌಲ್ಯಗಳನ್ನು ಮಿಡಿಯಲ್ಲಿ  ಪತ್ರಿಕಾರಂಗ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು.

ಕಾ.ತಾ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಜಿಲ್ಲಾ ಕಾ.ನಿ. ಪತ್ರಕರ್ತ ಸಂಘದ ಉಪಾಧ್ಯಕ್ಷ ಆರ್.ಬಿ.ಜಗದೀಶ್, ಜಿಲ್ಲಾ ಸಂಘದ ಸದಸ್ಯ ಹರಿಪ್ರಸಾದ್ ನಂದಳಿಕೆ, ರೊಟರಿಕ್ಲಬ್ ನ ರೊಟಾರಿಯನ್ ಇಕ್ಬಾಲ್ ಅಹ್ಮದ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪತ್ರಿಕಾವಿತರಕರಾದ ಪ್ರಕಾಶ್ ಕಿಣಿ ಅಜೆಕಾರು, ಹರಿಶ್ಚಂದ್ರ ನಾಯಕ್ ಮಾಳ, ನಿತ್ಯಾನಂದ ನಾಯಕ್ ಬಜಗೋಳಿ, ಗಣಪತಿ ಭಟ್, ರವೀಂದ್ರ ಕಾಮತ್ ಅವರನ್ನು ಸನ್ಮಾನಿಸಲಾಯಿತು

ಬಾಲಕೃಷ್ಣ ಭೀಮಗುಳಿ ಸ್ವಾಗತಿಸಿದರು. ಶರತ್ ಕಿನ್ನಿಗೋಳಿ‌ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News