ವಿಶಾಲ ಗಾಣಿಗ ಕೊಲೆ ಪ್ರಕರಣ: ಫ್ಲ್ಯಾಟ್ ಗೆ ಐಜಿಪಿ ಭೇಟಿ
ಬ್ರಹ್ಮಾವರ, ಜು.14: ಕುಮ್ರಗೋಡು ಗ್ರಾಮದಲ್ಲಿರುವ ರೆಸಿಡೆನ್ಸಿಯ ಫ್ಲ್ಯಾಟ್ ನಲ್ಲಿ ನಡೆದ ವಿಶಾಲ ಗಾಣಿಗ(35) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಮಂಗಳೂರು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕರಣದ ಕುರಿತು ಉಡುಪಿ ಎಸ್ಪಿ ಕಚೇರಿಯಲ್ಲಿ ಎಸ್ಪಿ ವಿಷ್ಣುವರ್ಧನ್ ಅವರಲ್ಲಿ ಮಾಹಿತಿ ಪಡೆದುಕೊಂಡ ಐಜಿಪಿ, ತನಿಖೆಯ ಬಗ್ಗೆ ಮಾರ್ಗ ದರ್ಶನ ನೀಡಿದರು. ಬಳಿಕ ಕುಮ್ರಗೋಡುನಲ್ಲಿರುವ ಫ್ಲ್ಯಾಟ್ ಗೆ ತೆರಳಿದ ಐಜಿಪಿ, ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಎಸ್ಪಿ ವಿಷ್ಣುವರ್ಧನ್ ಸೇರಿದಂತೆ ಹಲವು ಮಂದಿ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ಇನ್ನು ಸಿಗದ ಸುಳಿವು: ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ತಂಡ ವಿವಿಧ ಆಯಾಮಗಳನ್ನು ಮಾಹಿತಿಯನ್ನು ಕಳೆಹಾಕುತ್ತಿದೆ. ಆದರೆ ದುಷ್ಕರ್ಮಿ ಗಳಿಗೆ ಸಂಬಂಧಿಸಿ ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಮೂಲ ಗಳು ತಿಳಿಸಿವೆ.
ಈಗಾಗಲೇ ರಚಿಸಲಾದ ನಾಲ್ಕು ವಿಶೇಷ ತಂಡಗಳ ಪೈಕಿ ಎರಡು ತಂಡ ಗಳು ಮಾಹಿತಿ ಕಳೆಹಾಕುವ ಉದ್ದೇಶದಿಂದ ಹೊರ ಜಿಲ್ಲೆಗಳಿಗೆ ತೆರ ಳಿವೆ. ಶಂಕಿತ ಹಲವು ಮಂದಿಯನ್ನು ವಿಚಾರ ನಡೆಸಲಾಗಿದೆ. ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದರೂ ಈವರೆಗೆ ಯಾವುದೇ ಸುಳಿವು ದೊರೆತಿಲ್ಲ ಎಂದು ಪೊಲೀಸರು ಮೂಲಗಳು ತಿಳಿಸಿವೆ.