×
Ad

ತೋಟಗಾರಿಕೆಯಿಂದ ಸಹಾಯಧನ

Update: 2021-07-14 22:45 IST

ಮಂಗಳೂರು, ಜು.14: ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಬೆಳೆ, ರಕ್ಷಣೆ ಕುರಿತಾಗಿ ಸಹಾಯಧನ ಬಿಡುಗಡೆಯಾಗಿದೆ.

ಬಾಳೆ, ರಾಂಬೂಟನ್, ತರಕಾರಿ, ಮಲ್ಲಿಗೆ, ಕಾಳುಮೆಣಸು, ಗೇರು ಮತ್ತು ಕೋಕೋ ಬೆಳೆಗಳ ಪ್ರದೇಶ ವಿಸ್ತರಣೆ, ಗೇರು ಮತ್ತು ಕಾಳುಮೆಣಸು ಬೆಳೆಗಳ ಪುನಃಶ್ಚೇತನ, ಪ್ಲಾಸ್ಟಿಕ್ ಮಲ್ಚಿಂಗ್, ಕೃಷಿ ಹೊಂಡ ನಿರ್ಮಾಣ, ಸಮಗ್ರ ಕೀಟ-ರೋಗ ನಿಯಂತ್ರಣ, ಸಣ್ಣ ನರ್ಸರಿ, ಆಣಬೆ ಘಟಕ, ಪ್ಯಾಕ್ ಹೌಸ್, ಸೋಲಾರ್ ಪಾಲಿಟನಲ್ ಡ್ರೈಯರ್, ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸಹಾಯಧನ ಸೌಲಭ್ಯ ನೀಡಲಾಗುತ್ತಿದ್ದು, ಆಸಕ್ತರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

ತೋಟಗಾರಿಕೆ ಉಪನಿರ್ದೇಶಕ (9448999226), ಮಂಗಳೂರು ಜಿಪಂನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (8277806378, 0824-2423615), ಬಂಟ್ವಾಳದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (8277806371, 08255-234102), ಪುತ್ತೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (9731854527, 08251-230905), ಸುಳ್ಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (9880993238, 08257-232020), ಬೆಳ್ತಂಗಡಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು (9448336863, 08256-232148) ಸಂರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪ ನಿದೇರ್ಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News