×
Ad

ಮಾಧ್ಯಮದ ಮೇಲೆ 'ಹಿಡಿತ ಸಾಧಿಸುವುದಾಗಿ' ಹೇಳಿ ವಿವಾದ ಸೃಷ್ಟಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Update: 2021-07-16 10:57 IST

ಚೆನ್ನೈ: ತಮಿಳುನಾಡಿನ ನೂತನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು "ಮಾಧ್ಯಮವನ್ನು ಹಿಡಿತ''ದಲ್ಲಿಡುವ ಭರವಸೆ ನೀಡಿ ವಿವಾದಕ್ಕೀಡಾಗಿದ್ದಾರೆ. ಟೈಮ್ಸ್ ನೌ ವಾಹಿನಿಯು ಅಪ್‍ಲೋಡ್ ಮಾಡಿರುವ ವೀಡಿಯೋ ಕ್ಲಿಪ್‍ನಲ್ಲಿ ಅವರು ಮೇಲಿನ ಭರವಸೆ ನೀಡಿರುವುದು ಕೇಳಿಸುತ್ತದೆ.

"ಮಾಧ್ಯಮವನ್ನು ಮರೆತುಬಿಡಿ, ನಮ್ಮ ಬಗ್ಗೆ ಅವರು ಸುಳ್ಳುಗಳನ್ನು ಹೇಳುವಾಗ ಏನು ಮಾಡಬೇಕೆಂದು ಯೋಚಿಸುವುದನ್ನೂ ಮರೆತು ಬಿಡಿ. ನಾವು ಮಾಧ್ಯಮವನ್ನು ನಿಯಂತ್ರಿಸಿ ನಮ್ಮ ಹಿಡಿತದಲ್ಲಿಟ್ಟುಕೊಳ್ಳಬಹುದೆಂದು ಆರು ತಿಂಗಳೊಳಗೆ ನೀವು ನೋಡಲಿದ್ದೀರಿ. ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಯಾವುದೇ  ಸಂಸ್ಥೆ ಸದಾ ಸುಳ್ಳುಗಳನ್ನು ಹೇಳುತ್ತಿರಲು ಸಾಧ್ಯವಿಲ್ಲ,'' ಎಂದು ಅಣ್ಣಾಮಲೈ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

ಇದು ಹೇಗೆ ಸಾಧ್ಯ ಎಂಬುದಕ್ಕೂ ಅಣ್ಣಾಮಲೈ ವಿವರಣೆ ನೀಡಿದ್ದಾರಲ್ಲದೆ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಎಲ್ ಮುರುಗನ್ ಈಗ "ಆ ಸಚಿವಾಲಯದ ಸಚಿವ'' ಎಂದಿದ್ದಾರೆ. "ಮಾಜಿ ಮುಖ್ಯಸ್ಥರಾಗಿರುವ ಮುರುಗನ್ ಅಯ್ಯ ಈಗ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾಗಿದ್ದಾರೆ. ಎಲ್ಲಾ ಮಾಧ್ಯಮಗಳು ಅವರ ಅಡಿಯಲ್ಲಿ ಬರುತ್ತವೆ. ಸುಳ್ಳು ಸುದ್ದಿಯನ್ನು ಹೇಳುತ್ತಾ ಇರಲು ಸಾಧ್ಯವಿಲ್ಲ ಹಾಗೂ ಇಂತಹ ಸುಳ್ಳು ಸುದ್ದಿಗಳೊಂದಿಗೆ ರಾಜಕಾರಣ ಮಾಡಲು ಆಗುವುದಿಲ್ಲ.'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News