ಮುದುಂಗಾರುಕಟ್ಟೆ: ಜಮಾಅತ್ ಇಸ್ಲಾಮಿ ಹಿಂದ್ ನಿಂದ ನಿರ್ಮಿತ ಕೊಳವೆಬಾವಿ ಲೋಕಾರ್ಪಣೆ
ಕೊಣಾಜೆ, ಜು.16: ಜಮಾಅತ್ ಇಸ್ಲಾಮಿ ಹಿಂದ್ ಸಮಾಜ ಸೇವಾ ಘಟಕದ ವತಿಯಿಂದ ಬಾಳೆಪುಣಿ ಗ್ರಾಮದ ಮುದುಂಗಾರುಕಟ್ಟೆಯಲ್ಲಿ ನಿರ್ಮಿಸಲಾದ ಸಾರ್ವಜನಿಕ ಕೊಳವೆಬಾವಿಯ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.
ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರಝಿಯಾ ಬಾನು ಕೊಳವೆ ಬಾವಿಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಯು.ಟಿ.ಖಾದರ್, ನೀರಿನ ಸಮಸ್ಯೆಯಿರುವ ಈ ಪ್ರದೇಶದಲ್ಲಿ ಸಮಾಜ ಸೇವಾ ಘಟಕ ಜಮಾಅತೆ ಇಸ್ಲಾಮಿ ಹಿಂದ್, ಉಳ್ಳಾಲ ಘಟಕದವರು ಮುದುಂಗಾರುಕಟ್ಟೆಯಲ್ಲಿ ಸಾರ್ವಜನಿಕ ಕೊಳವೆಬಾವಿ ನಿರ್ಮಿಸಿಕೊಟ್ಟಿದ್ದು ಶ್ಲಾಘನೀಯವಾಗಿದೆ ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ ಸಮಾಜ ಸೇವಾ ಚಟುವಟಿಕೆಯ ಮಹತ್ವದ ಕುರಿತಾದ ಸಮಾಜ ಸೇವೆ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು.
ಬಾಳೆಪುಣಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್, ಉಳ್ಳಾಲ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಯು.ಎ. ಅಬ್ದುಲ್ ಕರೀಂ, ಬಾಳೆಪುಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮೀ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಹೈದರ್ ಕೈರಂಗಳ, ಗ್ರಾಮ ಪಂಚಾಯತ್ ಸದಸ್ಯರಾದ ಯಾಕೂಬ್, ಅಬ್ದುರ್ರಹ್ಮಾನ್, ಉಷಾ, ಗೀತಾ, ಜಮಾಅತ್ ಇಸ್ಲಾಮಿ ಹಿಂದ್ ಸಮಾಜ ಸೇವಾ ಘಟಕ, ಮಂಗಳೂರು ಅಧ್ಯಕ್ಷ ಅಬ್ದುಲ್ ಗಫೂರ್, ಮುದುಂಗಾರು ಕಟ್ಟೆ ದೇವಸ್ಥಾನದ ಅಧ್ಯಕ್ಷ ಪದ್ಮನಾಭ ರೈ, ಬಾಳೆಪುಣಿ ಶಾಲೆಯ ನಿವೃತ್ತ ಶಿಕ್ಷಕರಾದ ಜಗನ್ನಾಥ ಪೂಜಾರಿ, ಟೀಮ್ ವೆಲ್ಫೇರ್ ಉಳ್ಳಾಲ ಅಧ್ಯಕ್ಷ ಶಾಕೀರ್ ಅಹ್ಮದ್, ಮುದುಂಗಾರು ಕಟ್ಟೆ ಜುಮಾ ಮಸೀದಿಯ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಗೂ ಅಬ್ದುಲ್ ಅಝೀಝ್ ಮುದುಂಗಾರುಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.