×
Ad

ಕೊರೋನ ಹಿನ್ನೆಲೆ: ಅಲೆವೂರು ಗ್ರಾಪಂನಿಂದ ಶೇ.10 ತೆರಿಗೆ ಕಡಿತ

Update: 2021-07-16 17:41 IST

ಉಡುಪಿ, ಜು.16: ಕೊರೋನ ಲಾಕ್‌ಡೌನ್‌ನಿಂದಾಗಿ ಜನ ತೊಂದರೆಗೊಳ ಗಾಗಿರುವುದನ್ನು ಮನಗಂಡು ಅಲೆವೂರು ಗ್ರಾಮ ಪಂಚಾಯತ್ ತೆರಿಗೆ ಕಡಿತ ಗೊಳಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಲೆವೂರು ಹಾಗೂ ಕೊರಂಗ್ರಪಾಡಿ ಗ್ರಾಮಗಳ ಜನರಿಗೆ 2021-22ನೇ ಸಾಲಿನ ಮನೆ ತೆರಿಗೆ, ವಾಣಿಜ್ಯ ಕಟ್ಟಡ ತೆರಿಗೆ ಮತ್ತು ಉದ್ಯಮ ಪರವಾನಗಿ ಶುಲ್ಕವನ್ನು ಶೇ. 10 ಡಿತಗೊಳಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಮನೆ ಹಾಗೂ ಕಟ್ಟಡ ತೆರಿಗೆಯಿಂದ ಪಂಚಾಯತ್‌ಗೆ ಅಂದಾಜು 30 ಲಕ್ಷ ರೂ. ಆದಾಯವಿದ್ದು, ಉದ್ಯಮ ಪರವಾನಗಿ ಶುಲ್ಕವಾಗಿ ಸುಮಾರು 150 ಉದ್ಯಮಿಗಳಿಂದ ಅಂದಾಜು 1 ಲಕ್ಷ ರೂ. ಶುಲ್ಕ ಸಂಗ್ರಹವಾಗುತ್ತಿತ್ತು. ಇದೀಗ ಶೇ.10ರಷ್ಟು ತೆರಿಗೆ ಹಾಗೂ ಶುಲ್ಕ ವಿನಾಯಿತಿ ಪ್ರಕಟಿಸಿರುವುದರಿಂದ ಪಂಚಾಯತ್ ಆದಾಯದಲ್ಲಿ ಅಂದಾಜು 3 ಲಕ್ಷ ರೂ.ಕಡಿತವಾಗಲಿದೆ ಎಂದು ಅಂದಾಜಿಸಲಾಗಿದೆ.

ಕೊರೋನ ಸಾಂಕ್ರಾಮಿಕ ಭಾದಿಸಿರುವುದರಿಂದ ಹಾಗೂ ಲಾಕ್‌ಡೌನ್ ನಿಮಿತ್ತ ಉದ್ಯೋಗ ಹಾಗೂ ವ್ಯಾಪಾರದಲ್ಲಿ ನಷ್ಟ ಅನುಭವಿಸಿರುವುದ ರಿಂದ ನಮ್ಮ ಗ್ರಾಮದ ಜನ ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟ-ನಷ್ಟಗಳಿಗೆ ಸ್ಪಂದಿಸಬೇಕಾದದ್ದು ಗ್ರಾಪಂ ಕರ್ತವ್ಯ. ಈ ಪ್ರಯತ್ನವಾಗಿ ತೆರಿಗೆ ಹಾಗೂ ಶುಲ್ಕದ ಮೊತ್ತದಲ್ಲಿ ಶೇ. 10 ಕಡಿತಗೊಳಿಸಲಾಗಿದೆ. ಇದು ನಮ್ಮ ಇಡೀ ರಾಜ್ಯದಲ್ಲಿಯೇ ಪ್ರಥಮವಾಗಿದೆ. ಬೇರೆ ಪಂಚಾಯತಿಗಳೂ ಈ ಮಾದರಿ ಅನುಸರಿಸಿದರೆ ಜನರಿಗೆ ಸಣ್ಣ ಮಟ್ಟಿನ ಪರಿಹಾರ ಸಿಗುಬಹುದು ಎಂದು ಅಲೆವೂರು ಗ್ರಾಪಂ ಅಧ್ಯಕ್ಷೆ ಪುಷ್ಪಾ ಅಂಚನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News